HEALTH TIPS

ಆಮ್ಲಜನಕದ ಸಿಲಿಂಡರ್ ಸಹಿತ ದೆಹಲಿ ವಿಧಾನಸಭೆಗೆ ಬಂದ ಬಿಜೆಪಿ ಶಾಸಕರು

 

            ನವದೆಹಲಿ: ದೆಹಲಿ ವಿಧಾನಮಂಡಲದ ಮೂರು ದಿನಗಳ ಅಧಿವೇಶನ ಇಂದಿನಿಂದ ಆರಂಭವಾಗಿದೆ.

                 ದೆಹಲಿ ವಾಯುಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಎಎಪಿ ಸರ್ಕಾರದ ನಿಷ್ಕ್ರಿಯತೆ ವಿರೋಧಿಸಿ ಬಿಜೆಪಿ ಶಾಸಕರು ಆಮ್ಲಜನಕದ ಸಿಲಿಂಡರ್ ಸಹಿತ ಸದನಕ್ಕೆ ಆಗಮಿಸಿದರು.

                     ಸಿಲಿಂಡರ್ ಹೊರಗೆ ಇಡುವಂತೆ ಬಿಜೆಪಿ ಸದಸ್ಯರಿಗೆ ಸೂಚಿಸಿದ ಸ್ಪೀಕರ್ ರಾಮ ನಿವಾಸ್ ಗೋಯಲ್, ಇಷ್ಟು ಭದ್ರತೆ ನಡುವೆಯೂ ಆಮ್ಲಜನಕದ ಸಿಲಿಂಡರ್ ಅನ್ನು ಸದನಕ್ಕೆ ತಂದಿದ್ದು ಹೇಗೆ? ಎಂದು ಪ್ರಶ್ನಿಸಿದರು.


                   ಘಟನೆಯನ್ನು ಭದ್ರತಾ ಲೋಪ ಎಂದು ಪರಿಗಣಿಸಿದ ಸ್ಪೀಕರ್, ಭದ್ರತಾ ಸಿಬ್ಬಂದಿಯನ್ನು ತಮ್ಮ ಕೊಠಡಿಗೆ ಕರೆದು ಎಚ್ಚರಿಕೆ ನೀಡಿದ್ಧಾರೆ.

                     ಈ ಮಧ್ಯೆ, ಸರ್ಕಾರದ ಕಾರ್ಯವೈಖರಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಹಸ್ತಕ್ಷೇಪ ಕುರಿತಾಗಿ ಎಎಪಿ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸದನವನ್ನು 10 ನಿಮಿಷ ಮುಂದೂಡಲಾಗಿತ್ತು.

                  ಈ ಕುರಿತಂತೆ ನಿಲುವಳಿ ಮಂಡಿಸಿದ ಎಎಪಿ ಶಾಸಕ ಸೌರಭ್ ಭಾರದ್ವಾಜ್, ಮಕ್ಕಳ ಶಿಕ್ಷಣ ಮತ್ತು ಶಿಕ್ಷಕರ ತರಬೇತಿ ವಿಷಯದಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರು ಅಕ್ರಮವಾಗಿ ಹಸ್ತಕ್ಷೇಪ ಮಾಡುತ್ತಿದ್ದು, ತೊಡಕನ್ನು ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.

BJP MLAs arrive at the Delhi Assembly while carrying oxygen cylinders and wearing oxygen masks. The fourth part of this Assembly Session begins today.
Image
2.2K
See the latest COVID-19 information on Twitter

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries