ಒಡಿಯೂರು: ಇದೇ ಜನವರಿ 30 ಹಾಗೂ 31 ರ ಸೋಮವಾರ ಮತ್ತು ಮಂಗಳವಾರ
ಒಡಿಯೂರಿನಲ್ಲಿ ಜರಗಲಿರುವ 23ನೇ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಕವಿ,
ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರು ಆಯ್ಕೆಯಾಗಿದ್ದಾರೆ.
ನಮ್ಮ ನೆಲ, ನಮ್ಮ ಜಲ ಎಂಬ ಪರಿಕಲ್ಪನೆ ಅಡಿಯಲ್ಲಿ ಜರಗಲಿರುವ ಸಮ್ಮೇಳನದಲ್ಲಿ ವಿಚಾರ ಸಂಕಿರಣ, ವಿವಿಧ ಜಾನಪದ ನೃತ್ಯಸ್ಪರ್ಧೆಗಳು ಜರಗಲಿವೆ.
ತುಳು
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಜನೆ, ದುತ್ತೈತ ಎಂಬ ಕವನ ಸಂಕಲನಗಳು,
ಮುನ್ನುಡಿಗಳ ಸಂಕಲನವಾದ ಮದಿಪುದ ಪಾತೆರೊಲು, ಅನುವಾದಿತ ಸಂಕಲನ ರಬೀಂದ್ರ ಕಬಿತೆಲು,
ತುಳುಕಾವ್ಯೊ ಎಂಬ ಸಾಹಿತ್ಯ ಚರಿತ್ರೆ, ಪ್ರಾತಿನಿಧಿಕ ತುಳು ಕಬಿತೆಲು, ಆಕಾಶವಾಣಿ ತುಳು
ಕತೆಕ್ಕುಲು, ಇಂಚಿಪೊದ ತುಳು ಕಬಿತೆಲು, ಕಬಿತೆ-2017 ಮುಂತಾದ ಸಂಪಾದಿತ ಕೃತಿಗಳಿಂದ
ಪ್ರಸಿದ್ಧರಾಗಿರುವ ಡಾ. ಪೆರ್ಲ ಅವರು ಕನಕದಾಸರ ಮೋಹನ ತರಂಗಿಣಿ, ವಚನ ಸಾಹಿತ್ಯ
ಮೊದಲಾದವುಗಳನ್ನು ತುಳುವಿಗೆ ಅನುವಾದಿಸಿದ್ದಾರೆ. ರಾಷ್ಟ್ರೀಯ ಮಟ್ಟದ ಹಲವು
ಸಮ್ಮೇಳನಗಳಲ್ಲಿ ತುಳುವನ್ನು ಪ್ರತಿನಿಧಿಸಿದ್ದಾರೆ. ಇವರ ಹಲವು ತುಳು ಕೃತಿಗಳು ದೇಶದ
ಇತರ ಭಾಷೆಗಳಿಗೆ ಅನುವಾದ ಆಗಿವೆ.