ಕೊಚ್ಚಿ: ಕಲೋತ್ಸವಗಳಲ್ಲಿ ಹಲಾಲ್ ಆಹಾರ ನೀಡಲು ನಿರ್ಧರಿಸಿದರೆ ಅದನ್ನು ನಿಲ್ಲಿಸಲಾಗುವುದು ಎಂದು ಹಿಂದೂ ಐಕ್ಯವೇದಿ ಮುಖಂಡ ಆರ್.ವಿ.ಬಾಬು ಹೇಳಿರುವರು.
ಫೇಸ್ ಬುಕ್ ಮೂಲಕ ಅವರು ಗಂಭೀರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಮುಂದಿನ ಶಾಲಾ ಕಲೋತ್ಸವದಿಂದ ನಾನ್ ವೆಜ್ ಕೂಡ ನೀಡಲಾಗುವುದು ಎಂದು ಶಿಕ್ಷಣ ಸಚಿವ ವಿ.ಶಿವಂಕುಟ್ಟಿ ಹೇಳಿಕೆ ನೀಡಿದ್ದರು. ಇದರ ನಂತರ ಹಿಂದೂ ಐಕ್ಯವೇದಿ ನಾಯಕ ಪ್ರತಿಕ್ರಿಯೆ ನೀಡಿದ್ದಾರೆ.
ವೆಜ್ ಮತ್ತು ನಾನ್ ವೆಜ್ ಎರಡನ್ನೂ ಸೇವಿಸುವವರ ಜೊತೆ ಸರ್ಕಾರವಿದೆ ಎಂದು ವಿ.ಶಿವಂಕುಟ್ಟಿ ಹೇಳಿದ್ದರು. ಕಳೆದ 60 ವರ್ಷಗಳಿಂದ ಕಲೋತ್ಸವಗಳು ನಡೆಯುತ್ತಿದೆ. ಅಂದಿನಿಂದ ಸಸ್ಯಾಹಾರ ಪದ್ಧತಿ ರೂಢಿಯಲ್ಲಿದೆ. ಈ ಬಾರಿ ಎಲ್ಲಾ ಮಕ್ಕಳಿಗೂ ಬಿರಿಯಾನಿ ನೀಡಲು ಬಯಸಿರುವುದಾಗಿ ಸಚಿವರು ತಿಳಿಸಿದ್ದರು.
ಶಾಲಾ ಉತ್ಸವದಲ್ಲಿ ಮಾಂಸಾಹಾರ ನೀಡದಿರುವ ಕುರಿತು ಭಾರೀ ವಿವಾದ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಹಿಂದೂ ಐಕ್ಯವೇದಿ ಈ ಪ್ರತಿಕ್ರಿಯೆ ನೀಡಿದೆ.
ಕಲೋತ್ಸವಗಳಲ್ಲಿ ಹಲಾಲ್ ಆಹಾರ ನೀಡಲು ನಿರ್ಧರಿಸಿದರೆ ಎದುರಿಸಲಾಗುವುದು: ಹಿಂದೂ ಐಕ್ಯವೇದಿ
0
ಜನವರಿ 09, 2023