ಕಾಸರಗೋಡು: 2023 ಜ. 17ನ್ನು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ 1 ರಿಂದ 19 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಜಂತುಹುಳು ನಿವಾರಕವಾಗಿ ಅಲ್ಬೆಂಡಸೋಲ್ ಮಾತ್ರೆಗಳನ್ನು ವಿತರಿಸಲಾಗುವುದು ಎಂದು ಆರ್.ಸಿ.ಎಚ್ ಜಿಲ್ಲಾ ಅಧಿಕಾರಿ ಡಾ.ಅಮೀನಾ ಟಿ.ಪಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಣ್ಣಿನಿಂದ ಹರಡುವ ಜಂತುಹುಳು ಬಾಧೆ ಇಂದು ಸಾರ್ವಜನಿಕ ಆರೋಗ್ಯ ವಲಯದಲ್ಲಿ ಸಮಸ್ಯೆಯಾಗಿ ಉಳಿದಿವೆ. ಶೇ.65 ಮಕ್ಕಳು ಹುಳುಗಳಿಂದ ಸೋಂಕಿಗೆ ಒಳಗಗುತ್ತಿದ್ದಾರೆ ಎಂದು ಲೆಕ್ಕಾಚಾರ ಸೂಚಿಸುತ್ತಿದೆ. ಮಕ್ಕಳಲ್ಲಿ ಜಂತುಹುಳುವಿನ ಸೋಂಕಿನಿಂದ ಹಸಿವು ಕಡಿಮೆ, ವಾಂತಿ ಮತ್ತು ಭೇದಿ, ಮಲದಲ್ಲಿ ರಕ್ತ ಕಂಡುಬರುವುದು. ಮಕ್ಕಳ ದೇಹದಲ್ಲಿ ಹುಳುಗಳ ಸಂಖ್ಯೆ ಹೆಚ್ಚಾದಂತೆ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುತ್ತವೆ. ಇದು ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಅಸಮರ್ಥತೆಯನ್ನು ಉಂಟುಮಾಡುತ್ತದೆ. ಅಲ್ಲದೆ ಮಕ್ಕಳ ಕಲಿಕೆಗೆ ಅಡ್ಡಿಯಾಗುವ ಪರಿಸ್ಥಿತಿ ಇದೆ.
ಶಾಲೆ, ಅಂಗನವಾಡಿಗಳಲ್ಲಿ 1 ರಿಂದ 19 ವರ್ಷದ ಮಕ್ಕಳಿಗೆ ಅಲ್ಬೆಂಡಜೋಲ್ ಮಾತ್ರೆಗಳನ್ನು ವಿತರಿಸಲಾಗುತ್ತದೆ. 1 ವರ್ಷದಿಂದ 2 ವರ್ಷದ ಮಕ್ಕಳಿಗೆ ಅರ್ಧ ಮಾತ್ರೆ, 2 ರಿಂದ 3 ವರ್ಷ ವಯಸ್ಸಿನ ಮಕ್ಕಳಿಗೆ ಒಂದು ಮಾತ್ರೆಯನ್ನು ಕುದಿಸಿ ತಣಿಸಿದ ನೀರಿನಲ್ಲಿ ಕರಗಿಸಿ ನೀಡಬೇಕು. 3 ರಿಂದ 19 ವರ್ಷ ವಯಸ್ಸಿನ ಮಕ್ಕಳು ಊಟದ ನಂತರ ಒಂದು ಲೋಟ ಕುದಿಸಿ ತಣಿಸಿದ ನೀರಿನಿಂದ ಒಂದು ಮಾತ್ರೆಯನ್ನು ಸೇವಿಸಬೇಕು. ಅಲ್ಬೆಂಡಸೋಲ್ ಮಾತ್ರೆಗಳನ್ನು ಮಕ್ಕಳು ಸಏವಿಸುವ ಬಗ್ಗೆ ಪೆÇೀಷಕರು ಮತ್ತು ಶಿಕ್ಷಕರು ಖಚಿತಪಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ 1 ರಿಂದ 19 ವರ್ಷದೊಳಗಿನ 387185 ಮಕ್ಕಳಿಗೆ ಜ.17ರಂದು ಜಂತುಹುಳು ನಿವಾರಣಾ ಮಾತ್ರೆ (ಅಲ್ಬಂಡಜೋಲ್)ವಿತರಿಸಲಾಗುವುದು, ಅಂದು ಮಾತ್ರೆ ಲಭಿಸದವರಿಗೆ ಜ.24ರಂದು ವಿತರಿಸಲಾಗುವುದು. ಮಾತ್ರೆ ವಿತರಣೆಯ ಜಿಲ್ಲಾಮಟ್ಟದ ಉದ್ಘಾಟನೆ ಜ. 17ರಂದು ಬೆಳಗ್ಗೆ 10ಕ್ಕೆ ಚೆರ್ಕಳ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಾಸಕ ಎನ್.ಎ ನೆಲ್ಲಿಕುನ್ನು ನೆರವೇರಿಸುವರು.
ಕಾಸರಗೋಡು ಜಿಲ್ಲಾಡಳಿತ, ಆರೋಗ್ಯ, ಸ್ಥಳೀಯಾಡಳಿತ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು, ಸಾರ್ವಜನಿಕ ಪ್ರತಿನಿಧಿಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಜಂತುಹುಳು ನಿವಾರಣಾ ದಿನ ಚಟುವಟಿಕೆ ನಡೆಯಲಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್, ವೈದ್ಯಕೀಯೇತರ ಮೇಲ್ವಿಚಾರಕ ಮಧುಸೂದನನ್ ಸಿ ಉಪಸ್ಥಿತರಿದ್ದರು.
ನಾಳೆ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ-ಚೆರ್ಕಳದಲ್ಲಿ ಜಿಲ್ಲಾ ಮಟ್ಟದ ಉದ್ಘಾಟನೆ
0
ಜನವರಿ 15, 2023
Tags