ತಿರುವನಂತಪುರ: ರಾಜ್ಯದಲ್ಲಿ ಹೋಟೆಲ್ ಉದ್ಯೋಗಿಗಳಿಗೆ ಆರೋಗ್ಯ ಕಾರ್ಡ್ ಕಡ್ಡಾಯ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಆರೋಗ್ಯ ಕಾರ್ಡ್ ಇಲ್ಲದೆ ರೆಸ್ಟೋರೆಂಟ್‍ಗಳು ಕಾರ್ಯನಿರ್ವಹಿಸಲು ಅನುಮತಿಸುವುದಿಲ್ಲ. ನಕಲಿ ಕಾರ್ಡ್ ಬಳಸಲು ಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವರು ತಿಳಿಸಿದರು. ಫೆಬ್ರವರಿ 1 ರಿಂದ ಕಾನೂನು ಜಾರಿಗೆ ಬರಲಿದೆ.
ರಾಜ್ಯದಲ್ಲಿ ಆಹಾರ ವಿಷಬಾಧೆ ಪದೇ ಪದೇ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಚಿವರ ಈ ಆದೇಶ ಹೊರಬಿದ್ದಿದೆ. ಹೋಟೆಲ್‍ಗಳಲ್ಲಿ ಆಹಾರ ಸೇವಿಸಿದ ಹಲವರು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಇಲಾಖೆ ರಾಜ್ಯಾದ್ಯಂತ ತಪಾಸಣೆ ಮುಂದುವರೆಸಿದೆ.
ಇದರ ಭಾಗವಾಗಿ ಹಲವು ರೆಸ್ಟೋರೆಂಟ್ ಗಳಲ್ಲಿ ಹಳಸಿದ ಆಹಾರವನ್ನು ವಶಪಡಿಸಿಕೊಳ್ಳಲಾಗಿದೆ. ಉತ್ತರ ಪರವೂರಿನಲ್ಲಿ ಎರಡನೇ ಬಾರಿಗೆ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಕ್ಕೂ ಮುನ್ನ ಪರವೂರಿನ ಹೊಟೇಲ್‍ನಲ್ಲಿ ಆಹಾರ ಸೇವಿಸಿದ 60ಕ್ಕೂ ಹೆಚ್ಚು ಮಂದಿಗೆ ವಿಷಾಹಾರವಾಗಿ ಅಸ್ವಸ್ಥಗೊಂಡಿದ್ದಾರೆ.
ಹೋಟೆಲ್ ಉದ್ಯೋಗಿಗಳಿಗೆ ಇನ್ನು ಹೆಲ್ತ್ ಕಾರ್ಡ್ ಕಡ್ಡಾಯ!
0
ಜನವರಿ 18, 2023
Tags