ಕಾಸರಗೋಡು: ಪೈವಳಿಕೆ ಪಂಚಾಯಿತಿಯ ಚೇರಾಲ್‍ನಲ್ಲಿ ತಾಯಿ ಮತ್ತು ಪುತ್ರ ಒಂದೇ ದಿನ ನಿಧನರಾಗಿದ್ದು, ಇಬ್ಬರನ್ನೂ ಒಂದೇ ಚಿತೆಯಲ್ಲಿರಿಸಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಬಾಯಾರು ಚೇರಾಲ್ ನಿವಾಸಿ ದಿ. ಚನಿಯ ನಾಯ್ಕ ಅವರ ಪುತ್ರ ರಘುರಾಂ ನಾಯ್ಕ ಅವರಿಗೆ ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ದೇರಳಕಟ್ಟೆ ಆಸ್ಪತ್ರೆಯಲ್ಲಿ ಸೋಮವಾರ ದಾಖಲಿಸಿ ಸಂಜೆ ವೇಳೆ ಮನೆಗೆ ಕರೆತರಲಾಗಿತ್ತು. ಈ ಮಧ್ಯೆ ತಾಯಿ ಪಾರ್ವತಿ ಅವರಿಗೆ ಅಸೌಖ್ಯಕಾಣಿಸಿಕೊಂಡು ಮೃತಪಟ್ಟಿದ್ದಾರೆ. ಇವರ ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸುವ ಮಧ್ಯೆ ರಘುರಾಮ ನಾಯ್ಕ(61)ಅವರೂ ನಿಧನರಾಗಿದ್ದಾರೆ. ತಾಯಿಗಾಗಿ ನಿರ್ಮಿಸಲಾದ ಚಿತೆಯಲ್ಲಿ ಪುತ್ರ ರಘುರಾಮ ಅವರ ಮೃತದೇಹವನ್ನೂ ಇರಿಸಿ ಜತೆಯಾಗಿ ಅಂತ್ಯ ಸಂಸ್ಕಾರ ನಡೆಸಲಾಯಿತು.
ಸಾವಿನಲ್ಲೂ ಒಂದಾದ ತಾಯಿ-ಪುತ್ರ, ಒಂದೇ ಚಿತೆಯಲ್ಲಿ ಅಂತ್ಯ ಸಂಸ್ಕಾರ
0
ಜನವರಿ 11, 2023
Tags