ಕೊಚ್ಚಿ: ಉಣ್ಣಿ ಮುಕುಂದನ್ ಅಭಿನಯದ ಮಾಳಿಗಪ್ಪುರಂ ಚಲಚಿತ್ರ ನಿಜವಾಗಿ ಶಬರಿಮಲೆ ಅಯ್ಯಪ್ಪನನ್ನು ನಾಯಕನಾಗಿಟ್ಟುಕೊಂಡು ತಯಾರಾದ ಚಿತ್ರ.
ಮಾಳಿಗಪ್ಪುರಂ ಚಿತ್ರ ವಿದೇಶದಲ್ಲೂ ಸೂಪರ್‍ಹಿಟ್ ಆಗಿದೆ. ಕೇರಳ ಬಾಕ್ಸ್ ಆಫೀಸ್ ಟ್ವಿಟ್ಟರ್ ನಲ್ಲಿ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಕೇರಳದಿಂದಲೇ 9 ದಿನದ ಕಲೆಕ್ಷನ್ 8.1 ಕೋಟಿ. ವಿಶ್ವಾದ್ಯಂತ ಕಲೆಕ್ಷನ್ 10 ಕೋಟಿ ದಾಟಿದೆ. ಕೇರಳದಲ್ಲಿ ಚಿತ್ರದ ಮೊದಲ ಮೂರು ದಿನದ ಕಲೆಕ್ಷನ್ 2.62 ಕೋಟಿ.ರೂ.ಗಳು.
ಬಳಿಕ ಸನ್ನಿಧಾನಂ ಪಿ.ಒ. ಎಂಬ ಮತ್ತೊಂದು ಬಹುಭಾಷಾ ಚಿತ್ರವೂ ನಿರ್ಮಾಣ ಹಂತಕ್ಕೆ ಪ್ರವೇಶಿಸುತ್ತಿದೆ. ಸನ್ನಿಧಾನಂ ಪಿಒ ಎಂಬ ಶೀರ್ಷಿಕೆಯ ಈ ಚಿತ್ರವನ್ನು ರಾಜೀವ್ ವೈದ್ಯ ನಿರ್ದೇಶಿಸಿದ್ದಾರೆ. ಯೋಗಿ ಬಾಬು ಮತ್ತು ಪ್ರಮೋದ್ ಶೆಟ್ಟಿ ಚಿತ್ರದ ಕೇಂದ್ರ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ತಮಿಳು, ಮಲಯಾಳಂ, ಕನ್ನಡ, ತೆಲುಗು ಮತ್ತು ಹಿಂದಿ ಭಾμÉಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಮಕರಸಂಕ್ರಮಣದ ದಿನವಾದ ಜನವರಿ 14ರಂದು ಶಬರಿಮಲೆಯಲ್ಲಿ ಚಿತ್ರದ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಅಯ್ಯಪ್ಪನನ್ನೇ ಹೀರೋ ಆಗಿಟ್ಟುಕೊಂಡು ನಿರಂತರವಾಗಿ ಬಿಡುಗಡೆಯಾಗುತ್ತಿರುವ ಚಿತ್ರಗಳಿಗೆ ಕಾಲವೇ ಉತ್ತರ ನೀಡಲಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಬಿಂದು ಅಮ್ಮಿಣಿ ಪೋಸ್ಟ್ ಮಾಡಿದ್ದಾರೆ. ಈ ರೀತಿ ಎμÉ್ಟೀ ಚಿತ್ರಗಳು ಬಂದರೂ ಕಾಲವೇ ಉತ್ತರಿಸುತ್ತದೆ. ಜಗತ್ತು ಮುಂದುವರಿಯುತ್ತಿದೆ ಎಮದು ಬಿಂದು ಅಮ್ಮಿಣಿ ಅವರ ಫೇಸ್‍ಬುಕ್ ಪೋಸ್ಟ್ ಹೇಳುತ್ತದೆ.
ಉಣ್ಣಿ ಮುಕುಂದನ್ ಅವರು ಅಯ್ಯಪ್ಪ ಸ್ವಾಮಿ ತಮ್ಮ ಸೂಪರ್ ಹೀರೋ ಎಂದು ಘೋಷಿಸುವ ಮೂಲಕ ಚಿತ್ರವನ್ನು ಬಿಡುಗಡೆ ಮಾಡಿದ್ದರು. ಶಬರಿಮಲೆಯನ್ನು ಕೇಂದ್ರವಾಗಿಟ್ಟುಕೊಂಡು ಇನ್ನಷ್ಟು ಚಿತ್ರಗಳು ಬರಲಿವೆ ಎಂಬ ವರದಿಗಳಿವೆ.
ಅಯ್ಯಪ್ಪನ ಹೆಸರಿನಲ್ಲಿ ಬಿಡುಗಡೆಯಾದ ಚಿತ್ರಗಳು ಹಿಟ್: ಇದಕ್ಕೆಲ್ಲ ಕಾಲವೇ ಉತ್ತರ ನೀಡಲಿದೆ: ಬಿಂದು ಅಮ್ಮಿಣಿ
0
ಜನವರಿ 09, 2023