ಕಾಸರಗೋಡು: ಪೆರುಂಬಳ ಬೇನೂರ್ ನಿವಾಸಿ, ಮಂಜೇಶ್ವರ ಗೊವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜು ವಿದ್ಯಾರ್ಥಿನಿ ಅಂಜುಶ್ರೀಪಾರ್ವತಿ(19)ಮಾನಸಿಕ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಶಂಕೆ ಮೂಡುವಂತಾಗಿದೆ. ಈಕೆ ಬರೆದಿಟ್ಟದ್ದಾಳೆನ್ನಲಾದ ಪತ್ರ ಹಾಗೂ ಈಕೆ ಮೊಬೈಲ್ ಕಾಲ್ ಸಮ್ಮರಿ ಪರಿಶೀಲಿಸಿದಾಗ ಇಂತಹ ಅನುಮಾನಕ್ಕೆ ಪುಷ್ಠಿ ನೀಡಿದೆ. ಅತಿಯಾದ ಒತ್ತಡಕ್ಕೆ ಸಿಲುಕಿದ ಪರಿಣಾಮ ವಿಷ ಸೇವಿಸಿ ಆತ್ಮಹತ್ಯೆಗೈದಿರಬೇಕೆಂದು ಸಂಶಯ ವ್ಯಕ್ತವಾಗಿದೆ. ವಿಷಾಹಾರ ಸೇವನೆ ಸಾವಿಗೆ ಕಾರಣವಲ್ಲ ಎಂದು ಮರಣೋತ್ತರ ಪರೀಕ್ಷಾ ವರದಿ ತಿಳಿಸಿದ್ದು, ಹೊಟ್ಟೆಯೊಳಗೆ ಯಾವ ರೀತಿಯಲ್ಲಿ ವಿಷ ಸೇರ್ಪಡೆಗೊಂಡಿದೆ ಎಂಬುದನ್ನು ಖಚಿತಪಡಿಸುವ ಬಗ್ಗೆ ತನಿಖೆ ಮುಂದುವರಿದದೆ. ಅಂಜುಶ್ರೀ ಪಾರ್ವತಿ ಸಾವಿಗೆ ಕಾರಣವಾಗಿರುವ ವಿಷ ಪದಾರ್ಥದ ಬಗ್ಗೆ ಸಮಗ್ರ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಮೃತದೇಹದ ಆಂತರಿಕ ಅಂಗಾಂಗಗಳನ್ನು ಕೋಯಿಕ್ಕೋಡಿನ ಲ್ಯಾಬ್‍ಗೆ ಕಳುಹಿಸಲಾಗಿದ್ದು, ರಾಸಾಯನಿಕ ತಪಾಸಣಾ ವರದಿಯ ನಂತರವಷ್ಟೆ ವ್ಯಕ್ತವಾಗಲಿದೆ.
ಒತ್ತಡಕ್ಕೆ ಸಿಲುಕಿದ್ದಳೇ...?:
ಅಂಜುಶ್ರೀ ಪಾರ್ವತಿ ಬಾಹ್ಯ ಒತ್ತಡಕ್ಕೆ ಸಿಲುಕಿದ್ದಳೇ ಎಂಬ ಬಗ್ಗೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಪೊಲೀಸರು ಈಕೆಯ ಮನೆಯವರು, ಸಂಬಂಧಿಕರು ಹಾಗೂ ಸಹಪಾಠಿಗಳಿಂದ ಹೇಳಿಕೆ ಸಂಗ್ರಹಿಸಲೂ ಮುಂದಾಗಿದ್ದಾರೆ. ಕಾಸರಗೋಡು ಅಡ್ಕತ್ತಬೈಲಿನ ಹೋಟೆಲ್ ಒಂದರಿಂದ ಆನ್‍ಲೈನ್ ಮೂಲಕ ಖರೀದಿಸಿದ ಆಹಾರಪದಾರ್ಥ ಸೇವಿಸಿದ ನಂತರ ಅಸೌಖ್ಯ ಕಾಣಿಸಿಕೊಂಡಿರುವುದಾಗಿ ಮಾಹಿತಿಯಿದ್ದು, ಈ ಆಹಾರದೊಂದಿಗೆ ವಿಷ ಬೆರೆಸಿ ಸೇವಿಸಿರುವ ಬಗ್ಗೆಯೂ ಸಂಶಯ ಕಾಡಲಾರಂಭಿಸಿದೆ. ಡಿ. 31ರಂದು ಆಹಾರಪದಾರ್ಥ ಆನ್‍ಲೈನ್ ಮೂಲಕ ಖರೀದಿಸಿ ಸೇವಿಸಿದ್ದು, ಜ. 1ರಂದು ಅಸೌಖ್ಯ ಕಾಣಿಸಿಕೊಂಡಿತ್ತು. ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗಿದ್ದು, ಅಸೌಖ್ಯ ಮತ್ತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ, 7ರಂದು ಸಾವು ಸಂಭವಿಸಿದೆ.
ಅಂಜು ಶ್ರೀಪಾರ್ವತಿ ಸಾವು ಪ್ರಕರಣ: ಹಲವು ಆಯಾಮಗಳಿಂದ ತನಿಖೆಗೆ ಮುಂದಾದ ಪೊಲೀಸರು: ಆತ್ಮಹತ್ಯೆ ಶಂಕೆ
0
ಜನವರಿ 10, 2023