ಕಾಸರಗೋಡು: ಕೇರಳ ಖಾದಿ ಗ್ರಾಮೋದ್ಯೋಗ ಮಂಡಳಿಯು 2023 ಹೊಸ ವರ್ಷದ ಖಾದಿ ಮೇಳ ಆಯೋಜಿಸುತ್ತಿದ್ದು, ಜ.3ರಿಂದ 5ರ ವರೆಗೆ ಚೆರುವತ್ತೂರು ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಮೇಳ ನಡೆಯಲಿದೆ. 3ರಂದು ಬೆಳಗ್ಗೆ 10ಕ್ಕೆ ಚೆರುವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಿ.ವಿ.ಪ್ರಮೀಳಾ ಉದ್ಘಾಟಿಸುವರು. ಚೆರುವತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಿ.ವಿ.ರಾಘವನ್ ಅಧ್ಯಕ್ಷತೆ ವಹಿಸುವರು. ಮೇಳದಲ್ಲಿ ಖಾದಿ ಉತ್ಪನ್ನಗಳಿಗೆ ಶೇ. 30ರ ರಿಯಾಯಿತಿ ಒದಗಿಸಲಾಗಿದೆ.
ಮೇಳದಲ್ಲಿ ವಿವಿಧ ರೀತಿಯ ಮುಂಡುಗಳು, ರೇಷ್ಮೆ ಕಾಟನ್ ಮಸ್ಲಿನ್ ಸೀರೆಗಳು, ಚೂಡಿದಾರ್ ಬಟ್ಟೆಗಳು, ಕಾಟನ್ ಬೆಡ್, ಬೆಡ್ ಶೀಟ್ ಮತ್ತು ತಲೆದಿಂಬುಗಳು ಅಲ್ಲದೆ ಗ್ರಾಮೋದ್ಯೋಗ ಉತ್ಪನ್ನಗಳು ಇರಲಿದೆ. ಸರಕಾರಿ ಮತ್ತು ಅರೆ ಸರಕಾರಿ ನೌಕರರಿಗೆ 1 ಲಕ್ಷದ ವರೆಗೆ ಸಾಲ ಸೌಲಭ್ಯವು ದೊರೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.
ಚೆರ್ವತ್ತೂರಿನಲ್ಲಿ ಇಂದಿನಿಂದ ಹೊಸ ವರ್ಷದ ಖಾದಿ ಮೇಳ
0
ಜನವರಿ 02, 2023