HEALTH TIPS

ಸಮಾಜಮುಖೀ ಸಾಧನೆ ಅತ್ಯಂತ ಶ್ರೇಷ್ಠ: ಡಾ. ಬನಾರಿ ಅಭಿನಂದನಾ ಸಮಾರಂಭದಲ್ಲಿ ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಎಸ್. ಮಹಾಬಲೇಶ್ವರ ಭಟ್ ಅಭಿಮತ


           ಮಂಜೇಶ್ವರ: ಸಾಧನೆ ಸಮಾಜಮುಖಿಯಾಗಿದ್ದರೆ ಅದು ಅತ್ಯಂತ ಶ್ರೇಷ್ಠ. ಅದರಿಂದ ಸಮಾಜದ ಸರ್ವರಿಗೂ ಒಳಿತಾಗುತ್ತದೆ. ಅಂತಹ ವ್ಯಕ್ತಿಗಳು ತಾವು ಉನ್ನತಿ ಗಳಿಸುವುದಲ್ಲದೆ ಸಮಾಜವನ್ನೂ ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಾರೆ ಎಂದು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಎಸ್. ಮಹಾಬಲೇಶ್ವರ ಭಟ್ ಹೇಳಿದರು.
         ಮಂಜೇಶ್ವರದ ರಾಗಸುಧಾ ಸಂಗೀತ ಶಾಲೆಯು ಮಂಗಳೂರಿನ ಚೂಂತಾರು ಸರೋಜಿನಿ ಭಟ್ ಪ್ರತಿμÁ್ಠನ, ವಿಕಾಸ ಮೀಯಪದವು ಮತ್ತು ಊರ ಪರವೂರ ಬನಾರಿ ಅಭಿಮಾನಿಗಳ ಸಹಕಾರದೊಂದಿಗೆ ಮಂಜೇಶ್ವರದಿಂದ ವೃತ್ತಿ ನಿವೃತ್ತಿ ಹೊಂದಿ ಸುಳ್ಯದ ಗುಡ್ಯಡ್ಕದಲ್ಲಿ ನೆಲಸಲು ತೆರಳುತ್ತಿರುವ ಜನಪ್ರಿಯ ವೈದ್ಯ, ಸಾಹಿತಿ ಹಾಗೂ ಯಕ್ಷಗಾನ ಕಲಾವಿದ ಡಾ. ರಮಾನಂದ ಬನಾರಿ ಅವರಿಗೆ ನೀಡಿದ ಬೀಳ್ಕೊಡುಗೆ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.
       ಕಾರ್ಯಕ್ರಮವು ಮೀಯಪದವಿನ ವಿದ್ಯಾವರ್ಧಕ ಪ್ರೌಢಶಾಲೆಯ ನಾರಾಯಣೀಯಂ ಸಭಾಭವನದಲ್ಲಿ ಜರಗಿತು.



    ಅಭಿನಂದನಾ ಭಾಷಣ ಮಾಡಿದ ಯಕ್ಷಗಾನ ಕಲಾವಿದ ಡಾ. ಎಂ. ಪ್ರಭಾಕರ ಜೋಷಿಯವರು ಓರ್ವ ಕಲಾವಿದನಾಗಿ, ಸಾಹಿತಿಯಾಗಿ ಮತ್ತು ಕುಟುಂಬ ವೈದ್ಯರಾಗಿ ಡಾ, ರಮಾನಂದ ಬನಾರಿಯವರು ಮಂಜೇಶ್ವರ ಪರಿಸರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ್ದಾರೆ ಎಂದು ಬಣ್ಣಿಸಿದರು.
     ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಅವರು ಡಾ. ರಮಾನಂದ ಬನಾರಿಯವರು ತನ್ನ ವೃತ್ತಿಕ್ಷೇತ್ರವನ್ನು ಮೀರಿ, ಚೌಕಟ್ಟಿನಿಂದಾಚೆ, ಪ್ರವೃತ್ತಿಯ ಕ್ಷೇತ್ರದಲ್ಲಿ ಎತ್ತರಕ್ಕೇರಿದವರು. ಇಂತಹ ಸಾಧಕರು ದೀಪಸ್ತಂಭದಂತೆ ನಾಡಿಗೆ ಬೆಳಕು ನೀಡುತ್ತಿರುತ್ತಾರೆ ಎಂದರು.
      ನಾಟಕಕಾರ ಶಶಿರಾಜ್ ಕಾವೂರು ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬನಾರಿಯವರು ತನ್ನ ಮೇಲೆ ಬೀರಿದ ಪ್ರಭಾವವನ್ನು ತಿಳಿಸಿದರು.
         ಡಾ. ರಮಾನಂದ ಬನಾರಿ ದಂಪತಿಗಳನ್ನು ಶಾಲು, ಹೂಹಾರ, ಸನ್ಮಾನಪತ್ರ ಮತ್ತು ನೆನಪಿನ ಕಾಣಿಕೆಗಳೊಂದಗೆ ಗೌರವಿಸಲಾಯಿತು. ಊರ ಪರವೂರ ಅಭಿಮಾನಿಗಳು ಶಾಲು ಹಾರ ಹಾಕಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸ್ಥಳೀಯ ಮುಖಂಡರುಗಳಾದ ಕೆ. ಆರ್. ಜಯಾನಂದ, ಬಿ.ವಿ. ರಾಜನ್, ಹರ್ಷದ್ ವರ್ಕಾಡಿ, ಹರಿಶ್ಚಂದ್ರ ಮಂಜೇಶ್ವರ, ಪದ್ಮನಾಭ ಕೊಟ್ಟಾರಿ, ಕೊಣಾಜೆ ಶಂಕರ ಭಟ್, ಶ್ರೀಧರ ರಾವ್ ಎಂ. ಆರ್., ಡಾ. ಮುರಳೀಮೋಹನ ಚೂಂತಾರು ಮೊದಲಾದವರು ಡಾ. ಬನಾರಿಯವರ ವ್ಯಕ್ತಿತ್ವದ ವಿವಿಧ ಮುಖಗಳ ಕುರಿತು ಮಾತಾಡಿದರು.
         ಕಾರ್ಯಕ್ರಮದ ಆರಂಭದಲ್ಲಿ ರಾಗಸುಧಾ ಸಂಗೀತಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ ಶಿಕ್ಷಕಿ ಹಾಗೂ ಸಂಸ್ಥೆಯ ಮುಖ್ಯಸ್ಥೆ ಶಿಲ್ಪಾ ಭಟ್ ನೇತೃತ್ವದಲ್ಲಿ ರಾಗಾಭಿನಂದನ ಎಂಬ ಸಂಗೀತ ಕಾರ್ಯಕ್ರಮ ಜರಗಿತು. ಹಿರಿಯ ಪಾಕತಜ್ಞ ಟಿ. ಶ್ರೀಕೃಷ್ಣ ಹೊಳ್ಳ ಮೀಯಪದವು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಸಂಚಾಲಕ ವಿಶ್ವನಾಥ ಭಟ್ ಕೆ. ಜಿ. ಸ್ವಾಗತಿಸಿದರು.
     ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿಯವರು ಅಧ್ಯಕ್ಷೀಯ ನೆಲೆಯಿಂದ ಸಂಯೋಜನೆಗೊಳಿಸಿ ಮಾತಾಡಿದರು. ಶಿಕ್ಷಕರಾದ ಮಹಾಬಲೇಶ್ವರ ಕಾರ್ಯಕ್ರಮ ನಿರೂಪಿಸಿದರು. ವಿಘ್ನೇಶ್ ವಂದಿಸಿದರು.
       ಕಾರ್ಯಕ್ರಮದ ಕೊನೆಯಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಶ್ರೀಕೃಷ್ಣಸಂಧಾನ ಯಕ್ಷಗಾನ ತಾಳಮದ್ದಲೆ ಜರಗಿತು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries