HEALTH TIPS

ಬಾಕಿಯಾಗುವುದೇ ಬಾಕಿಲಪದವು ಸೇತುವೆ: ಮಂಜೂರಾಗಿ ಲಭಿಸಿದರೂ, ಮುಗಿಯದ ಸಂಕಷ್ಟ-ಕನ್ಸಲ್ಟ್ ಲೆಟರ್ ವಿಷಯದಲ್ಲಿ ಕಾಮಗಾರಿಗೇ ಬಂದೊದಗಿದ ಆಪತ್ತು



               ಪೆರ್ಲ: ಎಣ್ಮಕಜೆ ಪಂಚಾಯಿತಿ ಒಂದನೇ ವಾರ್ಡು ಸಾಯ ಮತ್ತು 17ನೇ ವಾರ್ಡು ಬಿರ್ಮೂಲೆ ಮಧ್ಯೆ ಸಂಪರ್ಕ ಕಲ್ಪಿಸುವ ಸೀರೆಹೊಳೆಗೆ ಅಡ್ಡ ಬಾಕಿಲಪದವು ಎಂಬಲ್ಲಿ ನಿರ್ಮಾಣಗೊಳ್ಳಲಿರುವ ಸೇತುವೆ ಕಾಮಗಾರಿ ಆರಂಭಗೊಂಡ ಕೆಲವೇ ದಿನಗಳಲ್ಲಿ ರಾಜಕೀಯ ಕೆಸರೆರಚಾಟದಿಂದ ಕೆಲಸ ಸ್ಥಗಿತಗೊಳ್ಳುವಂತಾಗಿದೆ. ಬಾಕಿಲಪದವುಗೆ ಸೇತುವೆ ಮಂಜೂರಾಗಿ ಲಭಿಸುತ್ತಿದ್ದಂತೆ ಹೊಳೆಗೆ ಆಚೆಬದಿಯಿರುವ ಒಂದು ಮತ್ತು ಎರಡನೇ ವಾರ್ಡು ಬಾಕಿಲಪದವು, ಚವರ್ಕಾಡು, ಸಾಯ ಪ್ರದೇಶದ ಜನತೆ ಎದುರಿಸಿದ್ದ ಯಾತ್ರಾ ದುರಿತ, ಸಂಚಾರ ಸಮಸ್ಯೆ ದೂರಾಗುವ ಆಶಾಭಾವನೆಗೆ ಇದು ತಣ್ಣೀರೆರಚಿದೆ.
            ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ರಸ್ತೆಯ ಪೆರ್ಲ ಸನಿಹದ ನಲ್ಕದಿಂದ ಎಡಕ್ಕೆ ಸುಮಾರು ಮೂರು ಕಿ.ಮೀ ದೂರದಲ್ಲಿ ಬಾಕಿಲಪದವಿನಲ್ಲಿ ಈ ಸೇತುವೆ ನಿರ್ಮಾಣವಾಗುತ್ತಿದೆ. ಹೊಳೆದಾಟಿ ಮುಂದಕ್ಕೆ ಸಾಗಿದರೆ ಸಾಯ, ಚವರ್ಕಾಡು, ಕುಞÂಪಾದೆ ಮೂಲಕ ಅಡ್ಯನಡ್ಕ ತಲುಪಬಹುದಾಗಿದೆ.  ಸೇತುವೆ ಆಚೆ ದಡದಲ್ಲಿರುವ ಬಾಕಿಲಪದವು, ಸಾಯ, ಚವರ್ಕಾಡು ಪ್ರದೇಶದ ಜನತೆಗೆ ಪೆರ್ಲದಲ್ಲಿರುವ ಎಣ್ಮಕಜೆ ಪಂಚಾಯಿತಿಗೆ ಬರಬೇಕಾದರೆ ಹೊಳೆ ದಾಟಿ ಬಿರ್ಮೂಲೆ, ನಲ್ಕ ಮೂಲಕ ಬರಬೇಕಾಗಿದೆ. ಇನ್ನು  ವಾಹನದ ಮೂಲಕ ಅಡ್ಯನಡ್ಕ ತೆರಳಿ ಸಾರಡ್ಕ, ಅಡ್ಕಸ್ಥಳ, ನಲ್ಕ ಹಾದಿಯಾಗಿ ಸುತ್ತುಬಳಸಿ ಪೆರ್ಲಕ್ಕೆ ತಲುಪಬೇಕು. ಈ ಮಧ್ಯೆ ಕರ್ನಾಟದ ಆಹಾರ ತಪಾಸಣಾ ಚೆಕ್‍ಪೋಸ್ಟ್ ಸಾರಡ್ಕದಲ್ಲಿ ಕಾರ್ಯಾಚರಿಸುತ್ತಿದ್ದು, ಕಳೆದ ಕರೊನಾ ಸಂದರ್ಭ ಈ ಚೆಕ್‍ಪೋಸ್ಟನ್ನು ಸಂಪೂರ್ಣ ಮುಚ್ಚುಗಡೆಗೊಳಿಸಿರುವುದರಿಂದ ಮಳೆಗಾಲದಲ್ಲಿ ಎಣ್ಮಕಜೆ ಪಂಚಾಯಿತಿಯ ಒಂದು ಮತ್ತು ಎರಡನೇ ವಾರ್ಡಿನ ಬಾಕಿಲಪದವು, ಸಾಯ, ಚವರ್ಕಾಡು ಪ್ರದೇಶ ಅಕ್ಷರಶ: ದ್ವೀಪಸದೃಶವಾಗಿತ್ತು. ಬಾಕಿಲಪದವು ಜನತೆಗೆ ಹೊಳೆದಾಟಿ ಬಿರ್ಮೂಲೆ, ನಲ್ಕ ಮೂಲಕ ಪೆರ್ಲ ತೆರಳಲು ಕೇವಲ ಐದು ಕಿ.ಮೀ ದೂರವಿದ್ದರೆ, ಚವರ್ಕಾಡು, ಸಾಯ, ಅಡ್ಯನಡ್ಕ, ಅಡ್ಕಸ್ಥಳ ಮೂಲಕ ಪೆರ್ಲ ತೆರಳಬೇಕಾದರೆ ಭರೋಬ್ಬರಿ 13ಕಿ.ಮೀ. ಸುತ್ತುಬಳಸಿ ಸಾಗಬೇಕು.



                            ಎಂಟು ಕೋಟಿ ವೆಚ್ಚದ ಸೇತುವೆ:
           ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅನ್ವಯ ಬಾಕಿಲಪದವು ಸೇತುವೆ ನಿರ್ಮಾಣಕ್ಕೆ ಎಂಟು ಕೋಟಿ ರೂ. ಬಜೆಟ್‍ನಲ್ಲಿ ಮೀಸಲಿರಿಸಿ ಟೆಂಡರ್ ಪ್ರಕ್ರಿಯೆಯನ್ನೂ ನಡೆಸಲಾಗಿದೆ. ಹೊಳೆಯಲ್ಲಿ ಸೇತುವೆ ಕಾಮಗಾರಿ ನಡೆಸಲು ತಾತ್ಕಾಲಿಕ ರಸ್ತೆನಿರ್ಮಾಣಕ್ಕಾಗಿ ಮಣ್ಣುಸುರಿದು, ಕಾಂಕ್ರೀಟ್ ಪೈಪು ಇಳಿಸಿ ಕಾಮಗಾರಿ ಆರಂಭಗೊಳ್ಳುತ್ತಿದ್ದಂತೆ ಸೇತುವೆಯ ಸಂಪರ್ಕ ರಸ್ತೆ ಹಾದುಹೋಗುವ ಜಾಗದ ವಿಚಾರದಲ್ಲಿ ಸಮಸ್ಯೆ ಎದುರಾಗಿದೆ.  ಸ್ಥಳೀಯ ನಿವಾಸಿ ಮದನ ಮೂಲ್ಯ ಎಂಬವರ ವಶದಲ್ಲಿದ್ದ ಈ ಜಾಗದಲ್ಲಿ ಹತ್ತು ವರ್ಷಕ್ಕೂ ಹಿಂದೆ ಒಂದು ಭಾಗವನ್ನು  ಬೇರೊಬ್ಬರಿಗೆ ಮಾರಾಟ ಮಾಡಿದ್ದರು. ಮದನಮೂಲ್ಯ ಅವರ ಜಾಗದಲ್ಲಿರುವವರು ಸೇತುವೆಯ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಅನುಮತಿ ಪತ್ರವನ್ನೂ ನೀಡಿದ್ದರು. ಆದರೆ ಗುತ್ತಿಗೆದಾರರು ಇವರು ಅನುಮತಿ ನೀಡಿದ ಜಾಗ ಬಿಟ್ಟು ಬೇರೆ ಜಾಗದಲ್ಲಿ ಕೆಲಸ ಆರಂಭಿಸಿದ್ದಾರೆ ಎಂಬುದಾಗಿ ದೂರಲಾಗಿದೆ.  ಇಲ್ಲಿ ಜಾಗ ಖರೀದಿ ಮಾಡಿದ್ದ ವ್ಯಕ್ತಿ, ತನಗೆ ಯಾವುದೇ ಸೂಚನೆ ನೀಡದೆ ಕಾಮಗಾರಿ ಆರಂಭಿಸಿರುವುದರ ವಿರುದ್ಧ ಕೋರ್ಟು ಮೆಟ್ಟಿಲೇರಿದ್ದಾರೆ. ಈ ಮಧ್ಯೆ ವಾಟ್ಸಪ್ ಗ್ರೂಪ್‍ಗಳಲ್ಲಿ ಸೇತುವೆ ಕಾಮಗಾರಿ ತಡೆಗೆ ಬಿಜೆಪಿಯ ಕೆಲವು ಮುಖಂಡರು ಕಾರಣ ಎಂಬ ರೀತಿಯಲ್ಲಿ ವ್ಯಾಪಕವಾಗಿ ಪ್ರಚಾರವನ್ನೂ ನಡೆಸಲಾಗಿದ್ದು, ಇದು ರಾಕೀಯ ಪಕ್ಷಗಳೊಳಗೆ ಮುಸುಕಿನ ಗುದ್ದಾಟಕ್ಕೂ ಕಾರಣವಗಿದೆ. ಆದರೆ ಜಾಗದ ಅನುಮತಿ ಪತ್ರದಲ್ಲಿನ ಸಮಸ್ಯೆ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಗಿದೆ.
ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಚೆಂಗಳದ ಗುತ್ತಿಗೆದಾರರೊಬ್ಬರು ಇಲ್ಲಿ ಈಗಾಗಲೇ ಲಕ್ಷಕ್ಕೂ ಮಿಕ್ಕಿ ಹಣ ಸುರಿದು, ಕಚ್ಚಾರಸ್ತೆ ನಿರ್ಮಿಸಿ, ಬೃಹತ್ ಜೆಸಿಬಿ, ವಿವಿಧ ಸಾಮಗ್ರಿ ಇಳಿಸಿ ಕೈಸುಟ್ಟುಕೊಂಡಿದ್ದಾರೆ. ತಮಗಾದ ನಷ್ಟವನ್ನು ಯಾರು ಭರಿಸುತ್ತಾರೆ ಎಂಬುದಾಗಿ ಗುತ್ತಿಗೆದಾರರು ಪ್ರಶ್ನಿಸುತ್ತಿದ್ದಾರೆ.  ಆದರೆ ಅನುಮತಿ ನೀಡಿದ ಜಾಗದಲ್ಲೇ ಕೆಲಸ ನಡೆಯುತ್ತಿದೆಯೇ ಎಂಬ ಬಗ್ಗೆ ಪರಾಮರ್ಶೆ ನಡೆಸಬೇಕಾದ ಲೋಕೋಪಯೋಗಿ ಇಲಾಖೆಯೂ ಇಲ್ಲಿ ನಿರ್ಲಕ್ಷ್ಯ ಧೋರಣೆ ತಳೆದಿದೆ. ಸ್ಥಳೀಯಾಡಳಿತ, ಲೋಕೋಪಯೋಗಿ, ಕಂದಾಯ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು ಒಟ್ಟಾಗಿ ಚರ್ಚಿಸಿ ಕಾಮಗಾರಿ ನಡೆಸಬೇಕಾಗಿದ್ದರೂ, ಇಲ್ಲಿ ಎಲ್ಲ ಮಾನದಂಡ ಗಾಳಿಗೆ ತೂರಲಾಗಿದೆ. ಸುಮಾರು 125ಮೀ. ಉದ್ದದ ಸೇತುವೆ, ಎರಡೂ ಬದಿ ಸಂಪರ್ಕ ರಸ್ತೆ ನಿರ್ಮಿಸುವುದು ಯೋಜನೆ ಉದ್ದೇಶವಾಗಿದೆ.


        ಅಭಿಮತ:
ಕನ್ಸಲ್ಟ್ ಲೆಟರ್ ಲಭಿಸಿದ ನಂತರವೇ ಕಾಮಗಾರಿ ಆರಂಭಿಸಲಾಗಿದೆ. ಜಾಗದ ಅನುಮತಿ ಪತ್ರದ ಬಗ್ಗೆ ಕಂದಾಯ ಇಲಾಖೆ ಸ್ಪಷ್ಟಪಡಿಸಿಕೊಡನೇಕಾಗಿದೆ. ಅನುಮತಿ ಪತ್ರದ ಹೆಸರಲ್ಲಿ ತಲೆದೋರಿರುವ ಸಮಸ್ಯೆ ಶೀಘ್ರ ಇತ್ಯರ್ಥಪಡಿಸಲಾಗುವುದು. ಅಗತ್ಯಬಿದ್ದಲ್ಲಿ ಸರ್ವೇ ನಡೆಸಿ ಜಾಗದ ತಕರಾರು ಪರಿಹರಿಸಿಕೊಂಡು ಕಾಮಗಾರಿ ಪುನರಾರಂಭಿಸಲಾಗುವುದು.
ಬೆನ್ನಿ ಜೋಸೆಫ್, ಸಹಾಯಕ ಇಂಜಿನಿಯರ್
ಲೋಕೋಪಯೋಗಿ ಇಲಾಖೆ, ಸೇತುವೆ ವಿಭಾಗ
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries