ಶ್ರೀನಗರ: ಕಾಶ್ಮೀರದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪ್ರೊ. ಅಬ್ದುಲ್ ರೆಹಮಾನ್ ರಹಿ(98) ಸೋಮವಾರ ನಿಧನರಾಗಿದ್ದಾರೆ.
ಇವರು ಖ್ಯಾತ ಕಾಶ್ಮೀರಿ ಕವಿ, ವಿಮರ್ಶಕ ಮತ್ತು ವಿದ್ವಾಂಸರಾಗಿದ್ದರು. ಅವರ 'ಸಿಯಾ ರೂಡ್ ಜೇರೆನ್ ಮಾಂಜ್' ಎಂಬ ಕವನ ಸಂಕಲನಕ್ಕೆ 2004ರಲ್ಲಿ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಇವರ 'ನವ್ರೋಜ್-ಎ-ಸಾಬಾ' ಕವನ ಸಂಕಲನಕ್ಕೆ 1961ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. 2000ರಲ್ಲಿ ಪದ್ಮಶ್ರೀಗೆ ಭಾಜನರಾಗಿದ್ದರು.
ಪ್ರಸಿದ್ಧ ಭಾಷಾಂತರಕಾರರಾಗಿ ಹೆಸರುವಾಸಿಯಾಗಿದ್ದ ರೆಹಮಾನ್ ರಹಿ, ಬಾಬಾ ಫರೀದ್ ಅವರ ಸೂಫಿ ಕಾವ್ಯವನ್ನು ಪಂಜಾಬಿಯಿಂದ ಕಾಶ್ಮೀರಿ ಭಾಷೆಗೆ ಭಾಷಾಂತರಿಸಿದ್ದಾರೆ. ದೀನಾ ನಾಥ್ ನಾಡಿಮ್ ಅವರ ಪ್ರಭಾವು ಇವರ ಕೃತಿಗಳಲ್ಲಿ ಕಾಣಬಹುದು.