ತಿರುವನಂತಪುರಂ: ಕರ್ನಾಟಕಕ್ಕೆ ಸೇವೆ ಸಲ್ಲಿಸುವ ಬಸ್‍ಗಳಿಗೆ ಅಲ್ಲಿಂದಲೇ ಇಂಧನ ತುಂಬಿಸಿಕೊಳ್ಳಬೇಕು ಎಂದು ಕೆ.ಎಸ್.ಆರ್.ಟಿ.ಸಿ. ಸಿ.ಎಂ.ಡಿ. ಬಿಜು ಪ್ರಭಾಕರನ್ ಸೂಚಿಸಿದ್ದಾರೆ.
ಕೇರಳಕ್ಕಿಂತ ಡೀಸೆಲ್ ಲೀಟರ್ ಗೆ 7 ರೂಪಾಯಿ ಅಗ್ಗದ ದರದಲ್ಲಿ ಕರ್ನಾಟಕದಲ್ಲಿ ಲಭಿಸುವ ಕಾರಣ ಕರ್ನಾಟಕಕ್ಕೆ ಸಂಚರಿಸುವ ಬಸ್ ಗಳಿಗೆ ಈ ಸೂಚನೆ ನೀಡಲಾಗಿದೆ. ಕರ್ನಾಟಕದಲ್ಲಿ ಡೀಸೆಲ್ ಬೆಲೆ 87.36 ರೂ., ಕೇರಳದಲ್ಲಿ 95.66 ರೂ.ಇದೆ.
ಕರ್ನಾಟಕದಿಂದ ಇಂಧನ ಖರೀದಿಸಲು ಕೆ.ಎಸ್.ಆರ್.ಟಿ.ಸಿ. ವಿಶೇಷ ಇಂಧನ ಕಾರ್ಡ್ ಕೂಡ ನೀಡಿದೆ. ತೈಲ ಕಂಪನಿಗಳು ನೀಡುವ ಈ ಕಾರ್ಡ್ ನ್ನು ಪಂಪ್‍ಗಳಿಂದ ಇಂಧನ ಖರೀದಿಸಲು ಬಳಸಬಹುದು. ಈವರೆಗೆ ಕರ್ನಾಟಕಕ್ಕೆ ಸಂಚರಿಸಿದ ಬಸ್‍ಗಳಿಗೆ ಪಾಲಕ್ಕಾಡ್ ಕೆ.ಎಸ್.ಆರ್.ಟಿ.ಸಿ. ಡಿಪೆÇೀದಿಂದ ಇಂಧನ ತುಂಬಿಸಲಾಗುತ್ತಿದೆ.
ಕರ್ನಾಟಕದಿಂದ ಡೀಸೆಲ್ ಅಳವಡಿಕೆ ಆರಂಭವಾದಾಗಿನಿಂದ ಕೆ.ಎಸ್.ಆರ್.ಟಿ.ಸಿ. 17 ಬಸ್‍ಗಳಲ್ಲಿ ಡೀಸೆಲ್‍ನಲ್ಲಿ ತಿಂಗಳಿಗೆ 3.15 ಲಕ್ಷ ರೂಪಾಯಿ ಉಳಿಸಲು ಸಾಧ್ಯವಾಗಿದೆ. ಮಾನಂತವಾಡಿ ಮೂಲಕ ಕರ್ನಾಟಕಕ್ಕೆ ತೆರಳುವ 15 ಸ್ವಿಫ್ಟ್ ಬಸ್‍ಗಳು ಮತ್ತು ಬೆಂಗಳೂರಿನಿಂದ ಕೇರಳಕ್ಕೆ ಸಂಚರಿಸುವ ಎರಡು ಬಸ್‍ಗಳು ಕರ್ನಾಟಕದಿಂದ ಡೀಸಲ್ಟಿಂಗ್ ಮಾಡುತ್ತಿವೆ. ಕರ್ನಾಟಕದಿಂದ ಕೆ.ಎಸ್.ಆರ್.ಟಿ.ಸಿ.ಯ ಈ ಸೇವೆಗಳಿಗೆ ದಿನಕ್ಕೆ 1,500 ಲೀಟರ್ ಡೀಸೆಲ್ ಪೂರೈಕೆಯಾಗುತ್ತಿದೆ. ಕಾಸರಗೋಡು-ಮಂಗಳೂರು, ಕಾಸರಗೋಡು-ಪುತ್ತೂರು, ಕಾಸರಗೋಡು-ಸುಳ್ಯ ಸಾಮಾನ್ಯ ರೂಟಿನ ಬಸ್ ಗಳಿಗೆ ಇನ್ನೂ ಈ ಸೂಚನೆ ಬಂದಿಲ್ಲ ಎನ್ನಲಾಗಿದೆ.
'ಕರ್ನಾಟಕ ಶರಣು’: ಕೇರಳಕ್ಕಿಂತ ಡೀಸೆಲ್ ಅಗ್ಗ; ಕರ್ನಾಟಕದಿಂದ ಕೆಎಸ್‍ಆರ್‍ಟಿಸಿ ಬಸ್‍ಗಳಿಗೆ ಡೀಸೆಲ್ ತುಂಬಿಸಲು ಸೂಚನೆ
0
ಜನವರಿ 23, 2023
Tags