HEALTH TIPS

ರಂಗಚಿನ್ನಾರಿಯಿಂದ ಶ್ಲಾಘನೀಯ ಕೆಲಸ : ಡಾ.ಅನಂತ ಕಾಮತ್



              ಕಾಸರಗೋಡು: ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಕನ್ನಡ ಭಾಷೆ, ಸಂಸ್ಕøತಿಯನ್ನು ಕಟ್ಟಿ ಬೆಳೆಸುತ್ತಿರುವ ರಂಗಚಿನ್ನಾರಿ ಸಂಸ್ಥೆ ಶ್ಲಾಘನೀಯ ಕೆಲಸ ಮಾಡುತ್ತಿದೆ. ಈ ಸಂಸ್ಥೆಯಿಂದ ಇನ್ನಷ್ಟು ಕಾರ್ಯಕ್ರಮಗಳು ನಿರಂತರವಾಗಿ ನಡೆದು ಶಾಶ್ವತ ಸ್ಥಾನ ಪಡೆಯುವಂತಾಗಲಿ ಎಂದು ಖ್ಯಾತ ನೇತ್ರ ತಜ್ಞ ಡಾ.ಅನಂತ ಕಾಮತ್ ಹೇಳಿದರು.
         ಅವರು ಸಾಮಾಜಿಕ-ಸಾಂಸ್ಕøತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು ಇದರ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ಆಯೋಜಿಸಿದ ಯುವಜನ ಸಂಗೀತೋತ್ಸವ  ಸದಾ ಎನ್ನ ಹೃದಯದಲ್ಲಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.  
         ಸಂಗೀತಕ್ಕೂ, ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ. ಸಂಗೀತವನ್ನು ಆಸ್ವಾದಿಸುವವರಿಗೆ ಆರೋಗ್ಯ ಲಾಭಗಳಿರುತ್ತವೆ. ತಾಳ, ರಾಗ, ಏರಿಳಿತಗಳಿಂದಾಗಿ ಮನಸ್ಸಿಗೆ ಆನಂದವನ್ನುಂಟು ಮಾಡುವ ಸಂಗೀತ ದೈಹಿಕ ಸ್ವಾಸ್ಥ್ಯ ನೀಡುತ್ತದೆ ಎಂದರು.
           ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರಿನ ಉದ್ಯಮಿ ನರೇಂದ್ರ ನಾಯಕ್ ಅವರು ಮಾತನಾಡಿ ನಿರಂತರ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೀಡುತ್ತಲೇ ಬಂದಿರುವ ರಂಗಚಿನ್ನಾರಿ ಸಂಸ್ಥೆ ಯುವ ಕಲಾವಿದರನ್ನು ಪೆÇೀಷಿಸುತ್ತ, ವೇದಿಕೆ ಕಲ್ಪಿಸುತ್ತ ಹೊಸ ತಲೆಮಾರನ್ನು ಸೃಷ್ಟಿಸುವ ಕಾರ್ಯ ಮಾಡುತ್ತಿದೆ. ಈ ಸಂಸ್ಥೆಯಿಂದ ಇನ್ನಷ್ಟು ಸಾಂಸ್ಕøತಿಕ ಕಾರ್ಯಕ್ರಮಗಳು ಮೂಡಿಬರಲಿ ಎಂದು ಹಾರೈಸಿದರು. ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದ ಮಾಜಿ ಮೊಕ್ತೇಸರ ಛತ್ರಪತಿ ಶಿವಾಜಿ ಪ್ರಭು ಅವರು ಮಾತನಾಡಿ ರಂಗಚಿನ್ನಾರಿ ಸಂಸ್ಥೆಯಿಂದ ನಿರಂತರವಾಗಿ ನಡೆಯುತ್ತಿರುವ ಸಾಂಸ್ಕøತಿಕ ಕಾರ್ಯಕ್ರಮಗಳು ಮಾದರಿ ಹಾಗು ಶ್ಲಾಘನೀಯ ಎಂದ ಅವರು ಇನ್ನಷ್ಟು ಕಾರ್ಯಕ್ರಮಗಳ ಮೂಲಕ ಯುವ ಪ್ರತಿಭೆಗಳನ್ನು ಬೆಳಕಿಗೆ ತರುವ ಕೆಲಸ ನಿರಂತರ ಸಾಗಲಿ ಎಂದು ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ವಿದ್ವಾನ್ ಉಪೇಂದ್ರ ಮಲ್ಯ ಅವರಿಗೆ ಗೌರವ ಪುರಸ್ಕಾರ ನಡೆಯಿತು.
       ನಾಗಕಿರಣ್ ನಾಯಕ್ ಹಾಗು ವಿದುಷಿ ಶಾಂತೇರಿ ಕಾಮತ್ ಅವರಿಂದ ಯುವಜನ ಸಂಗೀತೋತ್ಸವ ಸದಾ ಎನ್ನ ಹೃದಯದಲ್ಲಿ ಕಾರ್ಯಕ್ರಮ ಜರಗಿತು. ತಬಲಾದಲ್ಲಿ ಶ್ರೀದತ್ತ ಪ್ರ`Àು ಮಂಗಳೂರು, ಪಕವಾಝ್‍ನಲ್ಲಿ ಉಪೇಂದ್ರ ಮಲ್ಯ, ಹಾರ್ಮೋನಿಯಂನಲ್ಲಿ ವರುಣ್ ಮಲ್ಯ, ತಾಳದಲ್ಲಿ ರಿಷಬ್ ಮಲ್ಯ ಸಹಕರಿಸಿದರು. ರಂಗಚಿನ್ನಾರಿ ನಿರ್ದೇಶಕ ಕೆ.ಸತ್ಯನಾರಾಯಣ, ಉದಯ ಮನ್ನಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.
       ರಂಗಚಿನ್ನಾರಿ ನಿರ್ದೇಶಕ ಕೆ.ಸತೀಶ್ಚಂದ್ರ ಭಂಡಾರಿ ಸ್ವಾಗತಿಸಿದರು. ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕ ನುಡಿದು ಕಾರ್ಯಕ್ರಮ ನಿರೂಪಿಸಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries