ಕಾಸರಗೋಡು: ಕಾಞಂಗಾಡು ಅಮೃತ ವಿದ್ಯಾಲಯದ ಆಶ್ರಯದಲ್ಲಿ ಮಕ್ಕಳಲ್ಲಿರುವ ಸೃಜನಶೀಲತೆಯನ್ನು ಕಂಡುಹಿಡಿದು ಬೆಳೆಸುವ ನಿಟ್ಟಿನಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. 'ಅಮೃತವರ್ಣಂ' ಎಂಬ ಹೆಸರಲ್ಲಿ ಆಯೋಜಿಸಲಾದ ಸ್ಪರ್ಧೆಯಲ್ಲಿ ವಿವಿಧ ಶಾಲೆ ಹಾಗೂ ಅಂಗನವಾಡಿಗಳ ಮಕ್ಕಳು ಭಾಗವಹಿಸಿದ್ದರು. ಹಳೇ ವಿದ್ಯಾರ್ಥಿ ಹಾಗೂ ಕಲಾವಿದೆ ಶ್ರೇಯಾ ಜಯೇಶ್ ಪುಲ್ಲೂರು ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿದರು. ಪ್ರಾಚಾರ್ಯ ಗುರು ದೀಪಾಮೃತ ಚೈತನ್ಯ, ಉಪ ಪ್ರಾಂಶುಪಾಲೆ ರಜಿನಿ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ, ಪದಕ ಹಾಗೂ ವಿಜೇತರಿಗೆ ನಗದು ಬಹುಮಾನ ವಿತರಿಸಲಾಯಿತು.
ಅಮೃತ ವಿದ್ಯಾಲಯದಲ್ಲಿ 'ಅಮೃತವರ್ಣಂ' ಚಿತ್ರರಚನಾ ಸ್ಪರ್ಧೆ
0
ಜನವರಿ 14, 2023