ಕಾಸರಗೋಡು: ಭಾರತೀಯ ಸೇನಾ ದಿನಾಚರಣೆಯ ಅಂಗವಾಗಿ ಜ.15 ರಂದು ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಷನ್ ಕಾಸರಗೋಡು ವೆಸ್ಟ್ ಯೂನಿಟ್ ವತಿಯಿಂದ ನಿವೃತ್ತ ಸುಬೇದಾರ್ ವೈ. ಧಮೇಂದ್ರ ಆಚಾರ್ಯ ಮಧೂರು ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಕಾಸರಗೋಡು ವಲಯ ಅಧ್ಯಕ್ಷ ವಾಸು ಅವರು ಸನ್ಮಾನಿತರ ಕುರಿತು ಮಾತನಾಡಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಯೂನಿಟ್ ಅಧ್ಯಕ್ಷ ರತೀಶ್ ರಾಮು ವಿಡಿಯೋ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸನ್ಮಾನಿತರಾದ ವೈ. ಧಮೇರ್ಂದ್ರ ಆಚಾರ್ಯ ಅವರು ಸೇನೆಯ ನೆನಪುಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ವಲಯ ಕಾರ್ಯದರ್ಶಿ ಚಂದ್ರಶೇಖರ ಅಚಾರ್ಯ, ಯೂನಿಟ್ ಜತೆಕಾರ್ಯದರ್ಶಿ ವಿಶಾಖ್, ಕೋಶಾಧಿಕಾರಿ ಅಮಿತ್ ಹಾಗೂ ಸದಸ್ಯರಾದ ಗಣೇಶ್ ರೈ ಉಪಸ್ಥಿತರಿದ್ದರು. ಯುನಿಟ್ ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿದರು.
ವೈ. ಧಮೇರ್ಂದ್ರ ಆಚಾರ್ಯ ಮಧೂರು, ನಿವೃತ್ತ ಸುಬೇದಾರ್ ಅವರು ಅಣಂಗೂರು ವೈ. ನಾರಾಯಣ ಆಚಾರ್ಯ ಮತ್ತುಶ್ರೀಮತಿ ಕಮಲಾಕ್ಷಿ ಆಚಾರ್ಯ ಇವರ ಪ್ರಥಮ ಪುತ್ರನಾಗಿ 29.1.1952ರಲ್ಲಿ ಜನಿಸಿ 18.8.1971ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡು 28 ವರ್ಷ (ಸುಬೇದಾರ್ ರೇಂಕಿನ ಪೂರ್ಣ ಸರ್ವಿಸ್ ಬಳಿಕ 1.9.1999 ರಲ್ಲಿ ಸಿಪಾಯಿ, ನಾಯಕ್, ಹವಿಲ್ದಾರ್, ನಾಯಬ್ ಸುಬೇದಾರ್, ಸುಬೇದಾರ್ ರೇಂಕಿಗೆ ಬಡ್ತಿ ಹೊಂದಿದರು.
1971 ಕಾಸರಗೋಡಿನಲ್ಲಿ ಸೇನೆಯ ಸೇರ್ಪಡೆಗೊಂಡು ಸೇನೆಯ ತರಬೇತಿ ಬೆಂಗಳೂರಿನಲ್ಲಿ ಪೂರೈಸಿ, 1974ರಲ್ಲಿ ಅಸ್ಸಾಂಮಿನ ಗೋಹಟಿ, ಜಮ್ಮು-ಕಾಶ್ಮೀರದÀ ಜಮ್ಮು, ಮಹಾರಾಷ್ಟ್ರದ ಪೂನ, ಮಧ್ಯಪ್ರದೇಶದ ಬೋಪಾಲ್, ಯು.ಪಿ.ಯ ಮೀರತ್, ಪಂಜಾಬಿನ ಭಟಿಂಡಾ, ರಾಜಾಸ್ಥಾನದ ಕೋಟಾ, ಮಹಾರಾಷ್ಟ್ರದ ಔರಂಗಾಬಾದ್, ಅಸ್ಸಾಂಮಿನ ತೇಜ್‍ಪುರ, ಲೇ-ಲಡಾಕಿನ ಕಾರ್ಗಿಲ್ ಕೊನೆಗೆ ತಮಿಳುನಾಡು ಊಟಿಯ ವೆಲ್ಲಿಂಗ್ಟನ್ ಮುಂತಾದ ಪ್ರದೇಶಗಳಲ್ಲಿ ಸೇನೆಯಲ್ಲಿ 28ವರ್ಷಗಳ ಸುಧೀರ್ಘ ಸೇವೆ ನಡೆಸಿದ್ದಾರೆ.
1981ರಲ್ಲಿ ಸುಮಿತ್ರಳನ್ನು ಬಾಳಿನ ಸಂಗಾತಿಯಾಗಿ ಸ್ವೀಕರಿಸಿ, ಮಕ್ಕಳಾದ ಹರ್ಷ ಆಚಾರ್ಯ, ತುμÁರ್ ಆಚಾರ್ಯ, ಸೊಸೆ ಭಾಗ್ಯಶ್ರೀ ಮತ್ತು ಮೊಮ್ಮಗಳು ಚೈತಾಲಿಯ ಜೊತೆಯಲ್ಲಿ ಕಾಸರಗೋಡಿನ ಮಧೂರು ಪರಕ್ಕಿಲದಲ್ಲಿ ಜೀವನವನ್ನು ನಡೆಸುತ್ತಿದ್ದಾರೆ. ಕಾಸರಗೋಡು ಹಾಗೂ ವಿವಿಧ ಕ್ಷೇತ್ರಗಳ ಪದಾಧಿಕಾರಿಯಾಗಿ ಸೇವೆಗೈಯುತ್ತಿದ್ದಾರೆ.
ಭಾರತೀಯ ಸೇನಾ ದಿನಾಚರಣೆ: ವೈ.ಧರ್ಮೇಂದ್ರ ಆಚಾರ್ಯರಿಗೆ ಸನ್ಮಾನ
0
ಜನವರಿ 18, 2023