HEALTH TIPS

ರಾಜ್ಯದ ವನ್ಯಜೀವಿಗಳ ತೊಂದರೆಯನ್ನು ಅಧ್ಯಯನ ಮಾಡುವ ಕಾರ್ಯ ಕೆ.ಎಫ್.ಆರ್.ಐ. ಗೆ: ಕಾಡುಪ್ರಾಣಿಗಳ ಸಂಖ್ಯೆ ಹೆಚ್ಚಳ ತಡೆಯಲು ಅನುಮತಿ ನೀಡುವಂತೆ ಸುಪ್ರೀಂಕೋರ್ಟ್ ಮೊರೆ: ಸಚಿವ ಎ.ಕೆ.ಸಶೀಂದ್ರನ್


            ಕೋಝಿಕ್ಕೋಡ್: ಕೇರಳದಲ್ಲಿ ಕಾಡುಪ್ರಾಣಿಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ತಡೆಯಲು ಅನುಮತಿಗಾಗಿ ಸುಪ್ರೀಂ ಕೋರ್ಟ್‍ನ ಮೊರೆ ಹೋಗುವುದಾಗಿ ರಾಜ್ಯ ಅರಣ್ಯ ಸಚಿವ ಎ.ಕೆ.ಸಶೀಂದ್ರನ್ ಹೇಳಿದ್ದಾರೆ.
         ಈ ಬಗ್ಗೆ ತುರ್ತು ಮಹತ್ವದ ವಿಷಯವಾಗಿ ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಕಾನೂನು ಸಲಹೆ ಕೇಳಿದೆ. ಕಾಡು ಪ್ರಾಣಿಗಳ ಕಿರುಕುಳದ ಬಗ್ಗೆ ಅಧ್ಯಯನ ಮಾಡಲು ಕೆ.ಎಫ್.ಆರ್.ಐ.ಗೆ ವಹಿಸಲಾಗಿದೆ ಎಂದು ಸಚಿವರು ಹೇಳಿದರು.
           ಹುಲಿ ದಾಳಿ ಮುಂದುವರಿದಿರುವ ಹಿನ್ನೆಲೆಯಲ್ಲಿ ನಾಳೆ ವಯನಾಡಿನಲ್ಲಿ ಸರ್ವಪಕ್ಷ ಸಭೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು. ಇದರಲ್ಲಿ ಬರುವ ಸಲಹೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿದೆ. ಕ್ರಿಯಾಸೇನೆಯ ಸದಸ್ಯ ಬಲ ಹೆಚ್ಚಲಿದೆ. ಜನರ ಬದುಕಿನ ಸಮಸ್ಯೆಗಳನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಬಾರದು. ಈ ವಿಚಾರದಲ್ಲಿ ಹೋರಾಟ ಬೇಡ ಸಹಕಾರ ಬೇಕು ಎಂದು ಸಚಿವರು ಆಗ್ರಹಿಸಿದರು.
          ಕಳೆದ ಎರಡ್ಮೂರು ವರ್ಷಗಳಲ್ಲಿ ವನ್ಯಜೀವಿಗಳ ದಾಳಿ ಈ ಮಟ್ಟಕ್ಕೆ ಹೆಚ್ಚಿದೆ. ಈ ವಿಷಯದ ಬಗ್ಗೆ ಅನೇಕ ಅಧ್ಯಯನಗಳನ್ನು ನಡೆಸಲಾಗಿದೆ. ಇದ್ಯಾವುದೂ ಅರ್ಥವಿಲದೆ ವ್ಯರ್ಥವಾಗಿದೆ. ಕಾಡಿನೊಳಗಿನ ವಾಸಸ್ಥಳದಲ್ಲಿ ಬದಲಾವಣೆಯಾಗಿದೆ. ಕಾಡಿನಲ್ಲಿ ವನ್ಯಪ್ರಾಣಿಗಳಿಗೆ ಆಹಾರ ಮತ್ತು ನೀರು ಸಿಗುವುದಿಲ್ಲ. ಕಾಡುಪ್ರಾಣಿಗಳ ಸಂಚಾರದಲ್ಲೂ ಹೆಚ್ಚಳ ಕಂಡುಬಂದಿದೆ. ಎಲ್ಲಾ ಹುಲಿಗಳಿಗೆ ಕಾಡಿನಲ್ಲಿ ಒಂದು ನಿರ್ದಿಷ್ಟ ಸ್ಥಳ ಬೇಕು. ಈಗ ಹಾಗಲ್ಲ ಎಂದಿರುವರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries