ಸಮರಸ ಚಿತ್ರಸುದ್ದಿ: ಕಾಸರಗೋಡು ಪೆರುಂಬಳ ಎಸ್‍ಕೆಎಸ್‍ಬಿವಿ ಅಣಂಗೂರು ರೇಂಜ್ ಕಮಿಟಿಯ ನೇತೃತ್ವದಲ್ಲಿ 'ಸುರಕ್ಷಿತ ಭಾರತ ಈ ಕೈಗಳಲ್ಲಿ'ಎಂಬ ಶೀರ್ಷಿಕೆಯಡಿ ಬಾಲ ಭಾರತವನ್ನು ಆಯೋಜಿಸಲಾಗಿತ್ತು. ಪೆರುಂಬಳ ಮುಯಿಸ್ಸುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸದಲ್ಲಿ ಜಮಾಅತ್ ಅಧ್ಯಕ್ಷ ಅಬ್ದುಲ್ಲಾ ಶಾಲಿಮಾರ್ ಧ್ವಜಾರೋಹಣ ನೆರವೇರಿಸಿದರು. ಕಾರ್ಯದರ್ಶಿ ಲುಕ್ಮಾನುಲ್ ಹಕೀಂ ಪ್ರತಿಜ್ಞೆ ಬೋಧಿಸಿದರು. ವಿವಿಧ ಮದರಸಾಗಳ ವಿದ್ಯಾರ್ಥಿಗಳು ಭಾರತದ ಭೂಪಟದ ಆಕಾರದಲ್ಲಿ ಸಾಲುಗಟ್ಟಿ ನಿಂತು ಪ್ರತಿಜ್ಞೆ ಸ್ವೀಕರಿಸಿದರು.
ಸುರಕ್ಷಿತ ಭಾರತ ಈ ಕೈಗಳಲ್ಲಿ': ಬಾಲ ಭಾರತ
0
ಜನವರಿ 26, 2023