ಮಂಜೇಶ್ವರ: ಕೊಡ್ಲೊಮೊಗರು ನೂಜಿ ಅಂಗನಿಮಾರಿನ ಶ್ರೀ ಕಡಂಗಲ್ಲಾಯ ಮತ್ತು ಪರಿವಾರ ದೈವಗಳ ದೈವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ದೈವಸ್ಥಾನದ ಪರಿಸರದಲ್ಲಿ ಜರಗಿತು.
ಉದ್ಭವ ರೌದ್ರನಾಥೇಶ್ವರ ಕ್ಷೇತ್ರ ನಡುಬೊಟ್ಟುವಿನ ಧರ್ಮದರ್ಶಿ ರವಿ. ಎನ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಶುಭಹಾರೈಸಿದರು. ಆಡಳಿತ ಸಮಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ ಕೊಡ್ಲಮೊಗರು ಸಭಾಧ್ಯಕ್ಷತೆ ವಹಿಸಿದ್ದರು. ತಂತ್ರಿವರ್ಯ ಬ್ರಹ್ಮಶ್ರೀ ರಾಜೇಶ್ ತಾಳಿತ್ತಾಯ ಆಶೀರ್ವಚನ ನೀಡಿದರು. ಗ್ರಾಮ ಪವಿತ್ರಪಾಣಿ ಹರ್ಷ ಕುಮಾರ ಪಾತೂರಾಯ ಬೀಡು, ಆಡಳಿತ ಸಮಿತಿ ಗೌರಾವಧ್ಯಕ್ಷ ರಾಮ ಮೂಲ್ಯ ನೂಜಿ ಉಪಸ್ಥಿತರಿದ್ದರು. ಜೀರ್ಣೋದ್ದಾರ ಸಮಿತಿ ಗೌರಾವಧ್ಯಕ್ಷ ಕೇಶವ ಮಾಸ್ತರ್ ನೂಜಿ, ಜಿಲ್ಲಾ ಪಂಚಾಯತಿ ಸದಸ್ಯೆ ಕಮಲಾಕ್ಷಿ ವರ್ಕಾಡಿ, ಪಂಚಾಯತಿ ಸದಸ್ಯೆ ಆಶಾಲತಾ, ಛತ್ರ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದÀ ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ಸತ್ಯನಾರಾಯಣ ಮಾಸ್ತರ್ ದೈಗೋಳಿ ಶುಭ ಹಾರೈಸಿದರು. ಪ್ರಚಾರ ಸಮಿತಿ ಸದಸ್ಯ ಮಾಧವ ಶೆಟ್ಟಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ದಿನೇಶ್ ಮಾಸ್ತರ್ ಮಜಲು ಸ್ವಾಗತಿಸಿ, ಜೀರ್ಣೋದ್ದಾರ ಸಮಿತಿ ಜೊತೆಕಾರ್ಯದರ್ಶಿ ಚಂದ್ರಹಾಸ ಕಾನ ವಂದಿಸಿದರು. ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಸುಧೀರ್ ರಂಜನ್ ದೈಗೋಳಿ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಕಡಂಗಲ್ಲಾಯ ಮತ್ತು ಪರಿವಾರ ದೈವಗಳ ದೈವಸ್ಥಾನದ ಬ್ರಹ್ಮಕಲಶೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ
0
ಜನವರಿ 08, 2023