ಪೆರ್ಲ: ಪೆರ್ಲ ಸನಿಹದ ಬಣ್ಪುತ್ತಡ್ಕ ಶ್ರೀ ಅಯ್ಯಪ್ಪ ಭಜನಾಮಂದಿರದ ವಾರ್ಷಿಕ ಮಹಾಸಭೆ ಮಂದಿರದಲ್ಲಿ ಇತ್ತೀಚೆಗೆ ಜರುಗಿತು. ಮಂದಿರ ಸಮಿತಿ ಅಧ್ಯಕ್ಷ ಗೋವಿಂದ ಭಟ್ ಅಧ್ಯಕ್ಷತೆ ವಹಿಸಿದ್ದರು.ಕೊರಗಪ್ಪ ಕುಲಾಲ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.
ಈ ಸಂದರ್ಭ ಭಜನಾಮಂದಿರ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೋವಿಂದ ಭಟ್ ಅಧ್ಯಕ್ಷ, ಪ್ರಕಾಶ್ ಶೇಣಿ ಕಾರ್ಯದರ್ಶಿ, ನಾರಾಯಣ ಭಟ್ ಕೋಶಾಧಿಕಾರಿ, ರವಿಚಂದ್ರ ಬೆಳ್ಳೂರಮೂಲೆ ಮತ್ತು ಬಾಳಪ್ಪ ನಾಯ್ಕ್ ಉಪಾಧ್ಯಕ್ಷರು, ಪ್ರದೀಪ್ ಕೆ.ಎಸ್. ಮತ್ತು ಜೀವನ್ ಕುಮಾರ್ ಕಾಪಿಕ್ಕಾಡ್ ಜತೆಕಾರ್ಯದರ್ಶಿಗಳು, ರಾಘವ ಶೇಣಿ ಮತ್ತು ಐತ್ತಪ್ಪ ಪೂಜಾರಿ ಲೆಕ್ಕಪರಿಶೋಧಕರನ್ನಾಗಿ ಆಯ್ಕೆ ಮಾಡಲಾಯಿತು. ಕೊರಗಪ್ಪ ಕುಲಾಲ್ ಸ್ವಾಗತಿಸಿದರು. ಕೃಷ್ಣ ಕುಲಾಲ್ ವಂದಿಸಿದರು.
ಬಣ್ಪುತ್ತಡ್ಕ ಶ್ರೀ ಅಯ್ಯಪ್ಪ ಭಜನಾಮಂದಿರ ವಾರ್ಷಿಕ ಮಹಾಸಭೆ
0
ಜನವರಿ 03, 2023