ಕಾಸರಗೋಡು: ಖಾಸಗಿ ಬಸ್ ಸಿಬ್ಬಂದಿ ಮೇಲೆ ತಂಡವೊಂದು ಹಲ್ಲೆಗೆ ಯತ್ನಿಸಿ, ಅವಾಚ್ಯವಾಗಿ ನಿಂದಿಸಿದ ಹಿನ್ನೆಲೆಯಲ್ಲಿ ಧರ್ಮತ್ತಡ್ಕದಿಂದ ಬಂದ್ಯೋಡು ಮೂಲಕ ಉಪ್ಪಳ ಹಾಗೂ ಕಾಸರಗೋಡಿಗಿರುವ ಸಂಚಾರ ಸ್ಥಗಿತಗೊಳಿಸಿದ ಖಾಸಗಿ ಬಸ್ ಕಾರ್ಮಿಕರು ಮಿಂಚಿನ ಹರತಾಳ ನಡೆಸಿದ್ದಾರೆ.
ಗುರುವಾರ ರಾಥ್ರಿ ಕಾಸರಗೋಡಿನಿಂದ ಧರ್ಮತ್ತಡ್ಕ ತೆರಳುತ್ತಿದ್ದ ಖಾಸಗಿ ಬಸ್ ಕಯ್ಯಾರ್ ತಲುಪುತ್ತಿದ್ದಂತೆ ಬೈಕ್‍ಗಳಲ್ಲಿ ಆಗಮಿಸಿದ ತಂಡವೊಂದು ಬಸ್ ತಡೆದು ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆಗೆ ಯತ್ನಿಸಿದೆ. ಅಲ್ಲದೆ ಬಸ್ಸಿನೊಳಗೆ ನುಗ್ಗಿದ ತಂಡ ಬಸ್ಸಿನ ಚಾವಿಯನ್ನು ಕಿತ್ತು ಹೊರಕ್ಕೆಸೆದಿತ್ತು. ಸ್ಥಳಕ್ಕಾಗಮಿಸಿದ ನಾಗರಿಕರು ಮಾತುಕತೆ ನಡೆಸಿದ ಪರಿಣಾಮ ಬಸ್ ಪ್ರಯಾಣ ಮುಂದುವರಿಸಿತ್ತು. ಗುರುವಾರ ಸಂಜೆ ವಿದ್ಯಾರ್ಥಿಗಳ ತಂಡವೊಂದು ಇತರ ಪ್ರಯಾಣಿಕರಿಗೆ ಸಮಸ್ಯೆಯಾಗುವ ರೀತಿಯಲ್ಲಿ ಬಸ್ಸಿನೊಳಗೆ ದಾಂಧಲೆ ನಡೆಸಿದ್ದು, ಇದರಿಂದ ಬಸ್ ಸಿಬ್ಬಂದಿ ಬಸ್ ನಿಲುಗಡೆಗೊಳಿಸುತ್ತಿದ್ದಂತೆ ವಿದ್ಯಾರ್ಥಿಗಳು ಇಳಿದು ಪರಾರಿಯಾಗಿದ್ದರು. ಇದೇ ಘಟನೆಯ ಮುಂದುವರಿಕೆಯಾಗಿ ರಾತ್ರಿ ವೇಳೆ ತಂಡ ಹಲ್ಲೆಗೆ ಮುಂದಾಗಿರಬೇಕೆಂದು ಸಂಶಯಿಸಲಾಗಿದೆ. ಈ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬಸ್ ಮುಷ್ಕರದಿಂದ ಈ ಭಾಗದ ಜನತೆ ಹೆಚ್ಚಿನ ಸಮಸ್ಯೆ ಎದುರಿಸಬೇಕಾಯಿತು.
ಖಾಸಗಿ ಬಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ, ಅವಾಚ್ಯ ನಿಂದನೆ-ಧರ್ಮತ್ತಡ್ಕ ರೂಟಲ್ಲಿ ಮಿಂಚಿನ ಮುಷ್ಕರ
0
ಜನವರಿ 06, 2023
Tags