HEALTH TIPS

ವಿಮಾನದ ಊಟದಲ್ಲಿ ಕಲ್ಲು! ಮಹಿಳೆಯ ಟ್ವೀಟ್​ ವೈರಲ್​.​

Top Post Ad

Click to join Samarasasudhi Official Whatsapp Group

Qries

 

           ನವದೆಹಲಿ: ಇತ್ತೀಚೆಗೆ ನ್ಯೂಯಾರ್ಕ್‌ನಿಂದ ದೆಹಲಿಗೆ ವಿಮಾನದಲ್ಲಿ ಮದ್ಯದ ಅಮಲಿನಲ್ಲಿದ್ದ ಪ್ರಯಾಣಿಕನೊಬ್ಬ ಹಿರಿಯ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. 2022 ರ ಡಿಸೆಂಬರ್‌ನಲ್ಲಿ ಪ್ಯಾರಿಸ್‌ನಿಂದ ನವದೆಹಲಿಗೆ ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಪ್ರಯಾಣಿಕರ ಹೊದಿಕೆಯ ಮೇಲೆ ಕುಡಿದ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ಮತ್ತೊಂದು ಘಟನೆಯೂ ವರದಿಯಾಗಿದೆ.

                   ಇದೀಗ ಟಾಟಾ ಗ್ರೂಪ್ಸ್ ಒಡೆತನದ ವಿಮಾನಯಾನ ಸಂಸ್ಥೆ ವಿವಾದಕ್ಕೆ ಒಳಗಾಗಿದೆ. ಮಹಿಳಾ ಪತ್ರಕರ್ತೆಯೊಬ್ಬರು ತನಗೆ ನೀಡಲಾಗಿದ್ದ ತಿನಿಸಿಲ್ಲಿ ಸಿಕ್ಕ ಕಲ್ಲಿನ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಬಿಬಿಸಿಯಲ್ಲಿ ಕೆಲಸ ಮಾಡುತ್ತಿರುವ ಸರ್ವಪ್ರಿಯಾ ಸಾಂಗ್ವಾನ್, ಏರ್ ಇಂಡಿಯಾ ಫ್ಲೈಟ್ 215 ನಲ್ಲಿ ತನಗೆ ನೀಡಿದ್ದ ಊಟದ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ. ಫೋಟೊದಲ್ಲಿ ಅವರು ಕಲ್ಲಿನ ಚಿತ್ರವನ್ನೂ ಹಂಚಿಕೊಂಡಿದ್ದಾರೆ.

                ತಮ್ಮ ಟ್ವೀಟ್​ನಲ್ಲಿ ಈ ಬಗ್ಗೆ ಕಟುವಾಗಿ ಬರೆದುಕೊಂಡಿರುವ ಸರ್ವಪ್ರಿಯಾ ಸಾಂಗ್ವಾನ್, 'ಕಲ್ಲು ಇಲ್ಲದ ಆಹಾರವನ್ನು ನೀಡಲು ಏರ್​ ಇಂಡಿಯಾಗೆ ಹಣದ ಅಗತ್ಯವಿಲ್ಲ. ಇಂದು AI 215 ವಿಮಾನದಲ್ಲಿ ನನಗೆ ನೀಡಲಾದ ಆಹಾರದಲ್ಲಿ ನನಗೆ ಸಿಕ್ಕಿದ್ದು ಕಲ್ಲು. ಈ ರೀತಿಯ ನಿರ್ಲಕ್ಷ್ಯ ಒಳ್ಳೆಯದಲ್ಲ' ಎಂದು ಜನವರಿ 8 ರಂದು ಟ್ವೀಟ್ ಮಾಡಿದ್ದಾರೆ.

               ಈ ಬಗ್ಗೆ ಏರ್​ ಇಂಡಿಯಾ ಸರ್ವಪ್ರಿಯಾ ಸಾಂಗ್ವಾನ್‌ಗೆ ಉತ್ತರ ನೀಡಿದ್ದು 'ಆತ್ಮೀಯ ಮೇಡಮ್, ಇದು ನಿಜವಾಗಿಯೂ ಚಿಂತಾಜನಕ ವಿಚಾರ. ನಾವು ಈ ಬಗ್ಗೆ ನಮ್ಮ ಕೇಟರಿಂಗ್​ ಟೀಮ್​ ಜೊತೆಗೆ ಮಾತನಾಡುತ್ತೇವೆ. ಈ ಬಗ್ಗೆ ನಿಮ್ಮಲ್ಲಿ ಮಾತನಾಡಲು ನಮಗೆ ಸ್ವಲ್ಪ ಸಮಯ ನೀಡಿ. ಇದನ್ನು ನಮ್ಮ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳು' ಎಂದು ಟ್ವೀಟ್​ ಮಾಡಿದೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries