ಬದಿಯಡ್ಕ: ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗವು, ಮಕ್ಕಳಲ್ಲಿ ವೈಜ್ಞಾನಿಕ, ಸಂಶೋಧನಾತ್ಮಕ, ಸೃಜನಾತ್ಮಕ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ಇನ್‍ಸ್ಪಯರ್ ಅವಾರ್ಡ್ ಎಂಬ ಸ್ಪರ್ಧಾತ್ಮಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು 2022-23 ನೇ ಸಾಲಿನಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳಾದ ಸಮನ್ವಿ ಕೆ ಎಸ್ 8ನೇ ತರಗತಿ ಹಾಗೂ ಹತ್ತನೇ ತರಗತಿಯ ಶರಣ್ ಆಯ್ಕೆಗೊಂಡಿದ್ದು, ಜಿಲ್ಲಾ ಮಟ್ಟಕ್ಕೆ ಅರ್ಹರಾಗಿರುತ್ತಾರೆ. ಇವರು 10,000ರೂ ನಗದು ಬಹುಮಾನ ಗಳಿಸಿದ್ದಾರೆ. ಇವರಿಗೆ ಶಾಲಾ ಆಡಳಿತ ಮಂಡಳಿ, ರಕ್ಷಕ ಶಿಕ್ಷಕ ಸಂಘ, ಮುಖ್ಯೋಪಾಧ್ಯಾಯರು, ಹಾಗೂ ಅಧ್ಯಾಪಕ ವೃಂದ ಅಭಿನಂದನೆ ಸಲ್ಲಿಸಿದೆ.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಇಬ್ಬರು ವಿದ್ಯಾರ್ಥಿಗಳಿಗೆ ಇನ್‍ಸ್ಪಯರ್ ಅವಾರ್ಡ್
0
ಜನವರಿ 21, 2023
Tags