ತಿರುವನಂತಪುರಂ: ಡಿಸೆಂಬರ್ ತಿಂಗಳ ಸಾಮಾನ್ಯ ಪಡಿತರ ವಿತರಣೆಯನ್ನು ಜನವರಿ 5 ರವರೆಗೆ ವಿಸ್ತರಿಸುವುದನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.
ಡಿಸೆಂಬರ್ ತಿಂಗಳ ಪಡಿತರ ವಿತರಣೆ ನಿನ್ನೆಗೆ ಮುಕ್ತಾಯವಾಗಿದೆ ಎಂದು ಸಚಿವ ಜಿ.ಆರ್.ಅನಿಲ್ ಘೋಷಿಸಿರುವರು.
ಕೇಂದ್ರ ಸರ್ಕಾರವು ಪಡಿತರ ವಿತರಣೆಗೆ ಪರಿಷ್ಕøತ ಯೋಜನೆಯನ್ನು ಪರಿಚಯಿಸಿದ್ದರಿಂದ ಡಿಸೆಂಬರ್‍ನಲ್ಲಿ ಸಾಮಾನ್ಯ ಪಡಿತರ ವಿತರಣೆಯ ವಿಸ್ತರಣೆಯನ್ನು ಹಿಂಪಡೆಯಬೇಕಾಯಿತು ಎಂದು ಸಚಿವರು ಹೇಳಿದರು. ಇಂದು(ಮಂಗಳವಾರ) ಪಡಿತರ ಅಂಗಡಿಗಳಿಗೆ ರಜೆ ಘೋಷಿಸಲಾಗಿದೆ.
ಇದೇ ವೇಳೆ ಡಿಸೆಂಬರ್ ತಿಂಗಳಿನಲ್ಲಿ ಕೇಂದ್ರ ಸರ್ಕಾರದ ಪಿಎಂಜಿಕೆವೈ ಪಾಲಿನ ಅಕ್ಕಿಯನ್ನು ಖರೀದಿಸಲು ಸಾಧ್ಯವಾಗದವರಿಗೆ ಜನವರಿ 10ರವರೆಗೆ ಅವಕಾಶ ಕಲ್ಪಿಸಲಾಗಿದೆ. ಅದರ ತಾಂತ್ರಿಕ ವಿಷಯಗಳನ್ನು ಪೂರ್ಣಗೊಳಿಸಲು ಇಂದು ಪಡಿತರ ಅಂಗಡಿಗಳಿಗೆ ರಜೆ ಘೋಷಿಸಲಾಗಿದೆ.
ರಾಜ್ಯಾದ್ಯಂತ ಇಂದು ಪಡಿತರ ರಜೆ; ಡಿಸೆಂಬರ್ ಪಡಿತರ ವಿತರಣೆ ವಿಸ್ತರಣೆಯನ್ನು ಹಿಂಪಡೆತ
0
ಜನವರಿ 02, 2023