ಕಾಸರಗೋಡು: ರಾಜ್ಯ ಶಾಲಾ ಕಲಾ ಉತ್ಸವದಲ್ಲಿ ಯಕ್ಷಗಾನ ಸ್ಪರ್ಧೆಯಲ್ಲಿ ಕಲೆಯ ಬಗ್ಗೆ ಅಸಹಿಷ್ಣುತೆ ತೋರಿದ ಹಾಗೂ ಯಕ್ಷಗಾನ ಚೌಕಿ ಪೂಜೆ ತಡೆಹಿಡಿದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರವಿಶ ತಂತ್ರಿ ಕುಂಟಾರು ತಿಳಿಸಿದ್ದಾರೆ.
ಶಾಲಾ ಕಲೋತ್ಸವದಲ್ಲಿ ಪಾಳ್ಗೊಳ್ಳುವ ಯಕ್ಷಗಾಣ ತಂಡಗಳು ಚೌಕಿ ಪೂಜೆ ನಡೆಸಿದ ನಂತರವೇ ವೇದಿಕೆಗೆ ಪ್ರವೇಶಿಸುತ್ತಿದ್ದು, ಈ ಸಂಪ್ರದಾಯ ಹಲವಾರು ವರ್ಷಗಳಿಂದ ಜಾರಿಯಲ್ಲಿದೆ. ಅದನ್ನು ಕೇವಲ ಕಲೆಯಾಗಿ ನೋಡದೆ, ಅದಕ್ಕೆ ಬೇರೆ ಅರ್ಥಗಳನ್ನು ಕಲ್ಪಿಸುವ ಕೆಡುಕು ಸ್ವಭಾವವನ್ನು ಇಲ್ಲಿನ ಸಿಪಿಎಂ ನಾಯಕತ್ವ ತೋರುವ ಮೂಲಕ ಯಕ್ಷಗನ ಕಲೆಯನ್ನು ಕ್ಷುಲ್ಲಕವಾಗಿ ಚಿತ್ರೀಕರಿಸಲು ಮುಂದಾಘಿರುವುದು ವಿಪರ್ಯಾಸ. ಯಕ್ಷಗಾನ ಕಲೆ ಕಾಸರಗೋಡಿನ ಚರಿತ್ರೆಗೆ ನೀಡಿದ ಮಹತ್ತರ ಕೊಡುಗೆಯಾಗಿದೆ. ಇದನ್ನು ನಾಶ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸಿದ್ಧರಿಲ್ಲದಿದ್ದರೆ ಆಗುವ ಪರಿಣಾಮಗಳಿಗೆ ಸರಕಾರವೇ ಉತ್ತರಿಸಬೇಕಾಗುತ್ತದೆ ಎಂದು ರವೀಶ ತಂತ್ರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯಕ್ಷಗಾನಕ್ಕೆ ಅಪಮಾನ-ಅಪರಾಧಿಗಳ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ
0
ಜನವರಿ 08, 2023