ಮುಂಬೈ: ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ತಮ್ಮ ಸ್ಥಾನವನ್ನು ತೊರೆಯುವ ಬಯಕೆಯನ್ನು ವ್ಯಕ್ತಪಡಿಸಿರುವುದಾಗಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಸೋಮವಾರ ಹೇಳಿದ್ದಾರೆ.
ಉತ್ತರಾಖಂಡದ ಮಾಜಿ ಮುಖ್ಯಮಂತ್ರಿಯಾಗಿದ್ದ ಅವರು ತಮ್ಮ ಉಳಿದ ಜೀವನವನ್ನು ಓದು, ಬರವಣಿಗೆ ಮತ್ತು ಇತರ ಚಟುವಟಿಕೆಗಳಲ್ಲಿ ಕಳೆಯಲು ಬಯಸುವುದಾಗಿ ಹೇಳಿದರು.
"ಇತ್ತೀಚೆಗೆ ಪ್ರಧಾನ ಮಂತ್ರಿಯವರು ಮುಂಬೈಗೆ ಭೇಟಿ ನೀಡಿದಾಗ, ನನ್ನ ಎಲ್ಲಾ ರಾಜಕೀಯ ಜವಾಬ್ದಾರಿಗಳನ್ನು ತ್ಯಜಿಸಿ ಮುಂದಿನ ಜೀವನವನ್ನು ಓದುವಿಕೆ, ಬರವಣಿಗೆ ಮತ್ತು ಇತರ ಚಟುವಟಿಕೆಗಳಲ್ಲಿ ಕಳೆಯುವ ಬಯಕೆಯನ್ನು ಅವರಿಗೆ ತಿಳಿಸಿದ್ದೇನೆ.' ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಜನವರಿ 19 ರಂದು ಮುಂಬೈಗೆ ಭೇಟಿ ನೀಡಿ ಹಲವಾರು ಮೂಲಸೌಕರ್ಯ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದರು.
"ಸಂತರು, ಸಮಾಜ ಸುಧಾರಕರು ಮತ್ತು ವೀರ ಹೋರಾಟಗಾರರ ನಾಡಾದ ಮಹಾರಾಷ್ಟ್ರದಂತಹ ಮಹಾನ್ ರಾಜ್ಯದ ರಾಜ್ಯಪಾಲ ಆಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ನನಗೆ ಸಿಕ್ಕ ಗೌರವ" ಎಂದು ಕೋಶ್ಯಾರಿ ಹೇಳಿದರು.