ತ್ವಚೆ ತುಂಬಾ ಡ್ರೈಯಾಗುತ್ತಿದೆಯೇ? ಅದರ ಜೊತೆಗೆ ಮೊಡವೆ ಸಮಸ್ಯೆ ಬೇರೆ, ತ್ವಚೆ ಸೌಂದರ್ಯ ಮರಳಿ ತರುವುದು ಹೇಗೆ ಎಂದು ಗೊತ್ತಾಗುತ್ತಿಲ್ಲವೇ? ಜೇನು ಒಂದು ಸಾಮಗ್ರಿ ಇದ್ದರೆ ಸಾಕು ಇದನ್ನು ಬಳಸಿ ನಿಮ್ಮ ತ್ವಚೆಯ ಅಂದವನ್ನು ಹೆಚ್ಚಿಸುವುದು ಹೇಗೆ ಎಂದು ಹೇಳಿದ್ದೇವೆ ನೋಡಿ:
ಜೇನು ಎಲ್ಲಾ ತ್ವಚೆಯವರಿಗೆ ಒಳ್ಳೆಯದು
ಜೇನು ತ್ವಚೆ ಆರೈಕೆಗೆ ತುಂಬಾನೇ ಒಳ್ಳೆಯದು. ಇದರಲ್ಲಿ ಬ್ಯಾಕ್ಟಿರಿಯಾ ಕೊಲ್ಲುವ ಗುಣವಿರುವುದರಿಂದ ಮೊಡವೆ, ಹುಳಕಡ್ಡಿ ಮುಂತಾದ ಸಮಸ್ಯೆ ತಡೆಗಟ್ಟುತ್ತದೆ. ಅಲ್ಲದೆ ಎಣ್ಣೆ ತ್ವಚೆಯವರಿಗೆ ಜಿಡ್ಡಿನಂಶದಿಂದಾಗಿ ತ್ವಚೆಯ ಮಂಕು ಕಡಿಮೆಯಾಗುವುದು. ತ್ವಚೆಯ ಹೊಳಪು ಹೆಚ್ಚಿಸಲು ಜೇನು ಸಹಕಾರಿಯಾಗಿದೆ. ಜೇನಿನಲ್ಲಿರುವ ಸೌಂದರ್ಯವರ್ಧಕ ಗುಣಗಳು ಹಾಗೂ ಜೇನನ್ನು ನಿಮ್ಮ ತ್ವಚೆಗೆ ಹೇಗೆ ಬಳಸುವುದು ಎಂದು ನೋಡೋಣ ಬನ್ನಿ:
ಜೇನಿನಲ್ಲಿರುವ ಸೌಂದರ್ಯವರ್ಧಕ ಗುಣಗಳು
* ಜೇನು ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುತ್ತದೆ.
* ತ್ವಚೆಯಲ್ಲಿ ಮಾಯಿಶ್ಚರೈಸರ್ ಉಳಿಯುವಂತೆ ಮಾಡಿ ತ್ವಚೆ ಒಣಗುವುದನ್ನು ತಡೆಗಟ್ಟುತ್ತದೆ
* ತ್ವಚೆಯ ಹೊಳಪು ಹೆಚ್ಚುವುದು
* ಇನ್ನು ಮುಖದಲ್ಲಿ ಮೊಡವೆ ಕಲೆಗಳಿದ್ದರೆ ಅದು ಕಡಿಮೆ ಮಾಡಲು ಸಹಕಾರಿಯಾಗಿದೆ
* ಉರಿಯೂತ ತಡೆಗಟ್ಟುತ್ತದೆ. ತ್ವಚೆಯಲ್ಲಿ ಯೌವನ ಕಳೆ ಕಾಪಾಡಲು ಸಹಕಾರಿಯಾಗಿದೆ.
2. ಜೇನು ಮತ್ತು ಆಲೀವ್ ಎಣ್ಣೆ
ಜೇನು ತ್ವಚೆಯನ್ನು ಮಾಯಿಶ್ಚರೈಸರ್ ಆಗಿ ಇಟ್ಟುಕೊಳ್ಳಲು ಹಾಗೂ ಮುಖದಲ್ಲಿರುವ ಕಲೆಯನ್ನು ಹೋಗಲಾಡಿಸಲು ಸಹಕಾರಿ. ನಿಮ್ಮ ಮುಖದಲ್ಲಿ ತುಂಬಾ ಕಲೆಗಳಿದ್ದರೆ ಜೇನಿಗೆ ಸ್ವಲ್ಪ ಆಲೀವ್ ಎಣ್ಣೆ ಮಿಶ್ರ ಮಾಡಿ ಹಚ್ಚಿ ಕೆಲಗಳು ಕಡಿಮೆಯಾಗುವುದು. ಡ್ರೈ ತ್ವಚೆ ಸಮಸ್ಯೆ ಹೋಗಲಾಡಿಸಬಹುದು.
ಜೇನು, ಕಾಫಿ ಪುಡಿ ಮತ್ತು ಅರಿಶಿಣ ಪುಡಿ
ನೀವು ಕಾಫಿ ಬಳಸಿ ಮುಖವನ್ನು ಸ್ಕ್ರಬ್ ಮಾಡುವುದಾದರೆ ಜೊತೆಗೆ ಸ್ವಲ್ಪ ಅರಿಶಿಣ ಪುಡಿ ಹಾಗೂ ಜೇನು ಕೂಡ ಸೇರಿಸಿ. ಇದನ್ನು ಬಳಸಿ ಡೆಡ್‌ಸ್ಕಿನ್ ತೆಗೆಯಬಹುದು, ಅಲ್ಲದೆ ನೈಸರ್ಗಿಕವಾದ ಹಾಗೂ ಪರಿಣಾಮಕಾರಿಯಾದ ಸ್ಕ್ರಬ್ಬರ್ ಆಗಿದೆ.
ಜೇನು ಮತ್ತು ಮೊಟ್ಟೆಯ ಮಾಸ್ಕ್
ಜೇನು ಹಾಗೂ ಮೊಟ್ಟೆಯ ಬಿಳಿ ಮಿಶ್ರ ಮಾಡಿ ಅದಕ್ಕೆ ಸ್ವಲ್ಪ ನಿಂಬೆರಸ ಸೇರಿಸಿ ಮುಖಕ್ಕೆ ಹಚ್ಚಿ. ನಂತರ 20 ನಿಮಿಷ ಬಿಟ್ಟ ಮೇಲೆ ಮುಖ ತೊಳೆಯಿರಿ. ಹೀಗೆ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಾಡಿದರೆ ಮುಖದ ಕಾಂತಿ ಹೆಚ್ಚುವುದು.