ಪೆರ್ಲ: ಸವಿಹೃದಯದ ಕವಿಮಿತ್ರರು ಪೆರ್ಲ ಮತ್ತು ಸಮತಾ ಸಾಹಿತ್ಯ ವೇದಿಕೆ ಪಾಣಾಜೆ ಇದರ ನೇತೃತ್ವದಲ್ಲಿ ಆರ್ಲಪದವಿನಲ್ಲಿ ಕವಿಗೋಷ್ಠಿ ಮತ್ತು ಕೃತಿ ಸಮೀಕ್ಷೆ ಕಾರ್ಯಕ್ರಮ ಜರಗಿತು.
ಹಿರಿಯ ಕತೆಗಾರ ಕಾಕೆಕೊಚ್ಚಿ ನಾರಾಯಣ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಸಾಹಿತ್ಯತ್ಮಕವಾಗಿ ಗಡಿನಾಡಿನ ಪಾಣಾಜೆ,ಅರ್ಲಪದವು ಗ್ರಾಮಗಳು ಕೂಡಾ ಹಲವು ಸಾಹಿತ್ಯ ಸಾಧಕರ ಮೂಲಕ ಉದಾತ್ತ ಕೊಡುಗೆ ನೀಡಿದ ಮಣ್ಣಿನಲ್ಲಿ ಯುವ ಕವಿಗಳಿಗೆ ಪೆÇ್ರೀತ್ಸಾಹನೀಯವಾಗಿ ಏರ್ಪಡಿಸಿದ ಕಾರ್ಯಕ್ರಮ ಶ್ಲಾಘನೀಯ ಎಂದರು.
ಕವಿ ಉದಯರವಿ ಕೋಂಬ್ರಾಜೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬಾಲಕೃಷ್ಣ ಬೇರಿಕೆ ಅವರ "ಹೆಸರಿರದ ಹೂವು" ಹನಿಗವನ ಸಂಕಲನದ ಸಮೀಕ್ಷೆಯನ್ನು ಕವಯಿತ್ರಿ ದಿವ್ಯಾ ಗಟ್ಟಿ ಪರಕ್ಕಿಲ ಮಂಡಿಸಿದರು. ಹಿರಿಯ ಕವಿ,ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಉಪಸ್ಥಿತರಿದ್ದರು.
ಬಳಿಕ ನಡೆದ ಕವಿಗೋಷ್ಠಿಗೆ ಹಿರಿಯ ಕವಿ, ಸಾಹಿತಿ ಹರೀಶ ಪೆರ್ಲ ಚಾಲನೆ ನೀಡಿದರು.ಕವಿಗೋಷ್ಠಿಯಲ್ಲಿ ಪಾಣಾಜೆ ಗ್ರಾ.ಪಂ.ಅಧ್ಯಕ್ಷೆ ಭಾರತಿ ಭಟ್,ಪ್ರಿಯಾ ಸಾಯ,ವನಜಾಕ್ಷಿ ಚಂಬ್ರಕಾನ, ಸುಂದರ ಬಾರಡ್ಕ, ವಿಜಯ ಕಾನ, ನೋಣಯ್ಯ ಭರಣ್ಯ, ಮಾಲತಿ ಭರಣ್ಯ, ಸ್ವಾತಿ ಕಾರ್ಯಡು, ನಳಿನಿ ಸೈಪಂಗಲ್ಲು, ಚಂದ್ರಮೌಳಿ ಕಡಂದೇಲು, ಸುಜಯಾ ಸಜಂಗದ್ದೆ, ಜ್ಯೋತ್ಸಾ ಎಂ.ಕಡಂದೇಲು, ಸುಜಿತ್ ಬೇಕೂರು, ಅಪೂರ್ವ ಕಾರಂತ ಪುತ್ತೂರು ತಮ್ಮ ಸ್ವರಚಿತ ಕವನ ವಾಚನಗೈದರು. ಪ್ರಿಯಾ ಸಾಯ ಪ್ರಾರ್ಥನೆಗೈದರು.ಸಮತಾ ಸಾಹಿತ್ಯ ವೇದಿಕೆಯ ಸಂಚಾಲಕ ಬಾಲಕೃಷ್ಣ ಬೇರಿಕೆ ಸ್ವಾಗತಿಸಿ ಸವಿಹೃದಯದ ಕವಿಮಿತ್ರರು ಪೆರ್ಲ ಸಂಚಾಲಕ ಸುಭಾμï ಪೆರ್ಲ ವಂದಿಸಿದರು.ಅಪೂರ್ವ ನಿರೂಪಿಸಿದರು.