ಕಾಸರಗೋಡು: ಕೂಡ್ಲು ಗಂಗೆ ದೇವರಗುಡ್ಡೆ ಶ್ರೀಶೈಲಮಹಾದೇವ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಧನುಪೂಜಾ ಮಹೋತ್ಸವದ ಅಂಗವಾಗಿ ಸಾಮೂಹಿಕ ಶ್ರೀ ಸರ್ವೈಶ್ವರ್ಯ ಪೂಜೆ ನಡೆಯಿತು. ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ನಡೆಯಲಿರುವ ಸಾಮೂಹಿಕ ಸರ್ವೈಶ್ವರ್ಯ ಪೂಜೆ ನಡೆಯಿತು. ಈ ಸಂದರ್ಭ ಪಾಯಿಚ್ಚಾಲ್ ಶ್ರೀ ಮಹಾವಿಷ್ಣು ಭಜನಾಸಂಘ ವತಿಯಿಂದ ಭಜನೆ ನಡೆಯಿತು. ಒಂದು ತಿಂಗಳ ಕಾಲ ನಡೆಯುವ ಧನು ಪೂಜಾ ಮಹೋತ್ಸವ ಜ. 14 ಮಕರಸಂಕ್ರಮಣದಂದು ಸಮಾಪ್ತಿಗೊಳ್ಳಲಿದೆ.
ದೇವರಗುಡ್ಡೆ ಶ್ರೀಶೈಲದಲ್ಲಿ ಸಾಮೂಹಿಕ ಶ್ರೀ ಸರ್ವೈಶ್ವರ್ಯ ಪೂಜೆ
0
ಜನವರಿ 02, 2023
Tags