HEALTH TIPS

ನೇತಾಜಿ ಜಯಂತಿ: ಸಂಸತ್ತಿನಲ್ಲಿ ಭಾಷಣ ಮಾಡಲಿರುವ ರೋಹಿಣಿ


                ತಿರುವನಂತಪುರಂ: ತಿರುವನಂತಪುರಂ ಮೂಲದ ಎಂ. ರೋಹಿಣಿ  ಸಂಸತ್ತಿನಲ್ಲಿ ಭಾಷಣ ಮಾಡಲಿದ್ದಾರೆ.
                      23 ರಂದು ನೇತಾಜಿ ಸುಭಾμï ಚಂದ್ರ ಬೋಸ್ ಅವರ ಜನ್ಮದಿನದಂದು ರೋಹಿಣಿ ಅವರು ಅವರು ಸಂಸತ್ತಿನಲ್ಲಿ ಭಾಷಣ ಮಾಡಲಿರುವವರು. ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಒಂಬಿರ್ಲಾ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ರೋಹಿಣಿ ಅವರು ನೆಹರು ಯುವ ಕೇಂದ್ರದ ಪ್ರತಿನಿಧಿಯಾಗಿ ಸಂಸತ್ತಿನ ಸೆಂಟ್ರಲ್ ಹಾಲ್‍ನಲ್ಲಿ ನಡೆಯುವ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಭಾಷಣ ಹಿಂದಿಯಲ್ಲಿರಲಿದೆ. ಕೇರಳದ ಏಕೈಕ ಪ್ರತಿನಿಧಿ ತಿರುವನಂತಪುರಂ ಚೆಲ್ಲಮಂಗಲಂ ಶಂಕರ್ ನಿವಾಸ್ ನ ಜಯಚಂದ್ರ ಮತ್ತು ಮಿನಿ ದಂಪತಿಯ ಪುತ್ರಿ ಇವರು. ಎಂ. ವಿಷ್ಣು ಜಗನ್ನಾಥನ್ ಪತಿ. ಸಹೋದರ ಶಂಕರ್.
           ನೆಹರು ಯುವ ಕೇಂದ್ರವು ವಿವಿಧ ರಾಜ್ಯಗಳಲ್ಲಿ ನಡೆಸಿದ ಜಿಲ್ಲಾ ಮತ್ತು ರಾಜ್ಯ ಮಟ್ಟದ ಭಾಷಣ ಸ್ಪರ್ಧೆಗಳಲ್ಲಿ ಆಯ್ಕೆಯಾದ 27 ಮಂದಿಯಲ್ಲಿ ರೋಹಿಣಿ ಕೂಡ ಒಬ್ಬರು. ವಿಶೇಷ ಪೆವಿಲಿಯನ್‍ನಲ್ಲಿ ಪ್ರಧಾನಿಯವರೊಂದಿಗೆ ಸಂವಾದ ನಡೆಸಲು ಮತ್ತು ಗಣರಾಜ್ಯೋತ್ಸವ ಪರೇಡ್ ವೀಕ್ಷಿಸಲು ಅವರಿಗೆ ಅವಕಾಶ ಸಿಗಲಿದೆ.
            ರಾಷ್ಟ್ರೀಯ ಯುವಜನೋತ್ಸವ 2020 ರಲ್ಲಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ರೋಹಿಣಿ ಚೆಂಬಜರಂತಿ ಅವರು ಎಸ್‍ಎನ್ ಕಾಲೇಜಿನಲ್ಲಿ ಇಂಗ್ಲಿμï ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅನೇಕ ಸರ್ಕಾರಿ ಮತ್ತು ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. 2016 ರಿಂದ 2019 ರವರೆಗೆ, ಅವರು ಅಂತರ ವಿಶ್ವವಿದ್ಯಾಲಯ ಭಾಷಣ-ಚರ್ಚೆ ಸ್ಪರ್ಧೆಗಳಲ್ಲಿ ಕೇರಳ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದರು ಮತ್ತು ಏಳು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2017 ರಿಂದ 2020 ರವರೆಗೆ, ಕೇರಳ ವಿಶ್ವವಿದ್ಯಾನಿಲಯವು ಹಿಂದಿ ಭಾಷಣ ಸ್ಪರ್ಧೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಆರು ಬಾರಿ ಪ್ರತಿನಿಧಿಸಿದ್ದರು.  ವಿಶ್ವವಿದ್ಯಾನಿಲಯದ ಕಲಾ ಉತ್ಸವಗಳಲ್ಲಿ ಅವರು 13 ಬಹುಮಾನಗಳನ್ನು ಗೆದ್ದಿದ್ದಾರೆ.

          ಜೀವನದಲ್ಲಿ ನನ್ನ ಬಹುದೊಡ್ಡ ಆಸೆ ಈಡೇರುತ್ತಿದೆ ಎಂದು ರೋಹಿಣಿ ಮಾಧ್ಯಮಗಳೊಂದಿಗೆ ಸಂತಸ ತಿಳಿಸಿದ್ದಾರೆ.ಕೇರಳ ವಿಶ್ವವಿದ್ಯಾನಿಲಯ ಹಾಗೂ ಇತರ ಹಲವು ಸ್ಪರ್ಧೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ್ದರೂ, ಇಷ್ಟು ದೊಡ್ಡ ವೇದಿಕೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಬೇಕೆಂಬುದು ತಮ್ಮ ಜೀವನದ ಆಶಯವಾಗಿತ್ತು. ಅದನ್ನೇ ಈಗ ಸಾಧಿಸಲಾಗುತ್ತಿದೆ. ಕಾಲೇಜು ಜೀವನ ಮುಗಿದಿದೆ. ಭಾಷಣ ಸ್ಪರ್ಧೆಗಳಿಗೆ ವಿದಾಯ ಹೇಳಿದ್ದೆ ಎಂದು ಅವರು ತಿಳಿಸಿರುವರು.
              ಈಗ ಸಂಸತ್ತಿನ ಸೆಂಟ್ರಲ್ ಹಾಲ್‍ನಲ್ಲಿ ಪ್ರಧಾನಿ ಸಮ್ಮುಖದಲ್ಲಿ ಮಾತನಾಡುವ ಅವಕಾಶ ಲಭಿಸಿದೆ. ತುಂಬಾ ಸಂತೋಷವಾಗಿದೆ ಎಂದು ಅವರು ಹೇಳಿದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries