ಮುಳ್ಳೇರಿಯ: ನಿವೃತ್ತ ಶಿಕ್ಷಕ, ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದ ಪುಂಡೂರು ರಾಮಚಂದ್ರ ಪುಣಿಚಿತ್ತಾಯ((72)ಮಂಗಳವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಮುಳ್ಳೇರಿಯ ಗಜಾನನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಧೀರ್ಘ ಕಾಲ ಶಿಕ್ಷಕರಾಗಿದ್ದರು. ಯಕ್ಷಗಾನದ ವಿವಿಧ ವಿಭಾಗದಲ್ಲಿ ಪಳಗಿದವರಾಗಿ ಭಾಗವತಿಕೆ, ವೇಶ ಹಾಗೂ ತಾಳಮದ್ದಳೆ ಅರ್ಥಧಾರಿಯಾಗಿ ಗುರುತಿಸಿದ್ದರು. ಚೆಂಡೆ-ಮದ್ದಳೆ ವಾದಕರೂ ಆಗಿದ್ದರು. ತಮ್ಮ ಬಾಲ್ಯದಲ್ಲಿ ಎಂಟನೇ ತರಗತಿಯಲ್ಲಿರುವಾಗಲೇ ಶ್ರೀಮದ್ ಎಡನೀರು ಮಠದಲ್ಲಿ ನಡೆದ ಪ್ರದರ್ಶನವೊಂದರಲ್ಲಿ ಚೆಂಡೆ ವಾದಕ ಬಾಲ ಕಲಾವಿದರಾಗಿ ಯಕ್ಷಗಾನ ಕ್ಷೇತ್ರಕ್ಕೆ ಪಾದಾರ್ಪಣೆಗೈದವರಾಗಿದ್ದರು. ಉಳಿಯ ಧನ್ವಂತರಿ, ಕೋಟೂರು ಕಾರ್ತಿಕೇಯ ಕಲಾಸಂಘ, ಮಡಿಕೇರಿಯ ಚೌಡೇಶ್ವರಿ ಯಕ್ಷಗಾನ ಕಲಾಸಂಘ ಮೊದಲಾದ ಸಂಘ-ಸಂಸ್ಥೆಗಳಲ್ಲಿ ಸ್ಥಾಪಕರಾಗಿಯೂ, ಕಲಾವಿದರಾಗಿಯೂ ಕಾರ್ಯನಿರ್ವಹಿಸಿದ್ದರು. ಇವರ ಶಿಕ್ಷಣ-ಕಲಾ ಸೇವೆ ಗುರುತಿಸಿ ಹಲವು ಸಂಘಸಂಸ್ಥೆಗಳು ಗೌರವಿಸಿ ಅಭಿನಂದಿಸಿವೆ.
ಮೃತರು ಪತ್ನಿ, ಪುತ್ರ, ಪುತ್ರಿಯರು, ಸಹೋದರರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ನಿವೃತ್ತ ಶಿಕ್ಷಕ, ಕಲಾವಿದ ಪುಂಡೂರು ರಾಮಚಂದ್ರ ಪುಣಿಚಿತ್ತಾಯ ನಿಧನ
0
ಜನವರಿ 25, 2023