ಕಾಸರಗೋಡು: ಆಕರ್ಷಣೆಯ ಅಂತರರಾಷ್ಟ್ರೀಯ ಬೇಕಲ ಬೀಚ್ ಉತ್ಸವ ಹತ್ತು ಹಗಲು ರಾತ್ರಿಗಳವರೆಗೆ ಯಶಸ್ವಿಯಾಗಿ ನಡೆದು ನಿನ್ನೆ ಸಂಜೆ ಮುಕ್ತಾಯಗೊಂಡಿದೆ. ಸಮಾರೋಪ ಸಮಾರಂಭವನ್ನು ಶಾಸಕ ಇ.ಚಂದ್ರಶೇಖರನ್ ಉದ್ಘಾಟಿಸಿದರು. ಶಾಸಕ ಸಿ.ಎಚ್.ಕುಂಞಂಬು ಅಧ್ಯಕ್ಷತೆ ವಹಿಸಿದ್ದರು. ಪಳ್ಳಿಕ್ಕೆರೆ ಕಡಲತೀರಕ್ಕೆ ನೇರವಾಗಿ ತೆರಳಲು ಮೇಲ್ಸೇತುವೆ ನಿರ್ಮಿಸಲಾಗುವುದು ಮತ್ತು ಕರಾವಳಿ ರಸ್ತೆ ಪೂರ್ಣಗೊಂಡ ನಂತರ ಬೀಚ್‍ಗೆ ಪ್ರವೇಶವನ್ನು ಸುಧಾರಿಸಲಾಗುವುದು ಎಂದು ಶಾಸಕರು ಈ ಸಂದರ್ಭ ಹೇಳಿದರು. ಜಾತ್ರೆ ವೀಕ್ಷಿಸಲು ಒಂದು ಮಿಲಿಯನ್ ಜನ ಆಗಮಿಸಿದ್ದು, ಕಡಲತೀರದಲ್ಲಿ ಹೆಚ್ಚಿನ ಮೂಲ ಸೌಕರ್ಯಗಳನ್ನು ಸಿದ್ಧಪಡಿಸಿ ಮುಂದಿನ ವರ್ಷದಿಂದ ಈ ಬಾರಿಗಿಂತ ಅದ್ಧೂರಿಯಾಗಿ ಜಾತ್ರೆ ನಡೆಸಲಾಗುವುದು ಎಂದರು.
ಗ್ರಂಥಲೋಕ ಸಂಪಾದಕ ಪಿ.ವಿ.ಕೆ.ಪನಾಯಾಲ್ ಸಾಂಸ್ಕøತಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಕೇರಳ ಸಹಕಾರಿ ಠೇವಣಿ ಖಾತ್ರಿ ಮಂಡಳಿ ಉಪಾಧ್ಯಕ್ಷ ಕೆ.ಪಿ.ಸತೀಶ್ಚಂದ್ರನ್, ಕೆಸಿಸಿಪಿಎಲ್ ಅಧ್ಯಕ್ಷ ಟಿ.ವಿ.ರಾಜೇಶ್, ಮಾಜಿ ಶಾಸಕ ಕೆ.ಕುಂಞÂ ರಾಮನ್, ಸಿನಿಮಾ ಧಾರಾವಾಹಿ ನಟ ಉಣ್ಣಿರಾಜ್ ಚೆರುವತ್ತೂರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್, ಪಳ್ಳಿಕ್ಕರ ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಕುಮಾರನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಂಘಟನಾ ಸಮಿತಿಯ ವಿವಿಧ ಉಪಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು. ಮಾಜಿ ಶಾಸಕ ಕೆ.ವಿ.ಕುಂಞÂ ರಾಮನ್ ಸ್ವಾಗತಿಸಿ, ಬಿಆರ್ ಡಿಸಿ ಎಂಡಿ ಪಿ.ಶಿಜಿನ್ ಧನ್ಯವಾದವಿತ್ತರು. ಹತ್ತು ದಿನಗಳ ಕಾಲ ನಡೆದ ಬೇಕಲ ಉತ್ಸವಕ್ಕೆ ಉತ್ತಮ ಸಹಕಾರ ನೀಡಿದ ಹಸಿರು ಕ್ರಿಯಾಸೇನೆ, ಕುಟುಂಬಶ್ರೀ, ಯುವ ಕಲ್ಯಾಣ ಮಂಡಳಿ, ಐ ಆ್ಯಂಡ್ ಪಿಆರ್‍ಡಿ, ನಾಗರಿಕ ರಕ್ಷಣಾ ಪಡೆ, ಸಾಮಾಜಿಕ ಮಾಧ್ಯಮ ತಂಡ, ಡಿಜಿಟಲ್ ಮೀಡಿಯಾ ತಂಡ ಹಾಗೂ ಆರೋಗ್ಯ ಕಾರ್ಯಕರ್ತರನ್ನು ಸಂಘಟನಾ ಸಮಿತಿ ಅಧ್ಯಕ್ಷ ಸಿ.ಎಚ್.ಕುಂಞಂಬು ಸನ್ಮಾನಿಸಿದರು. ಸ್ಟೀಫನ್ ದೇವಸಿ ನೇತೃತ್ವದಲ್ಲಿ ಸಂಗೀತ ಔತಣ ನಡೆಯಿತು.
ಬೇಕಲ ಉತ್ಸವ ಸಮಾರೋಪ
0
ಜನವರಿ 02, 2023