ತಿರುವನಂತಪುರಂ: ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಬಿಬಿಸಿ (ಬ್ರಿಟಿμï ಬ್ರಾಡ್‍ಕಾಸ್ಟಿಂಗ್ ಕಾಪೆರ್Çರೇxನ್) ನಿರ್ಮಿಸಿರುವ 'ಇಂಡಿಯಾ: ದಿ ಮೋದಿ ಕ್ವೆಶ್ಚನ್' ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ವಿವಾದದ ನಡುವೆಯೇ, ಕಾಂಗ್ರೆಸ್ ಹಿರಿಯ ನಾಯಕ ಎಕೆ ಆಂಟನಿ ಅವರ ಪುತ್ರ ಮತ್ತು ಕೆಪಿಸಿಸಿ ಡಿಜಿಟಲ್ ಮೀಡಿಯಾ ಸೆಲ್ ಸಂಚಾಲಕ ಅನಿಲ್ ಆಂಟೋನಿ ವಿಭಿನ್ನ ನಿಲುವು ಹೊಂದಿರುವ ಹೇಳಿಕೆ ನೀಡಿ ಹುಬ್ಬೇರುವಂತೆ ಮಾಡಿದ್ದಾರೆ.
ಭಾರತೀಯ ಸಂಸ್ಥೆಗಳ ಮೇಲೆ ಬಿಬಿಸಿಯ ದೃಷ್ಟಿಕೋನಕ್ಕೆ ಆದ್ಯತೆ ನೀಡುವುದು ಅತ್ಯಂತ ಅಪಾಯಕಾರಿ ಅಭ್ಯಾಸ ಎಂದು ಅನಿಲ್ ಆಂಟೋನಿ ಟ್ವೀಟ್ ಮಾಡಿದ್ದಾರೆ.
"ಬಿಜೆಪಿಯೊಂದಿಗೆ ದೊಡ್ಡ ಭಿನ್ನಾಭಿಪ್ರಾಯವಿದೆ, ಆದರೆ ಭಾರತದಲ್ಲಿ ಜನರು ಭಾರತೀಯ ಸಂಸ್ಥೆಗಳ ಮೇಲೆ ಬಿಬಿಸಿಯ ದೃಷ್ಟಿಕೋನವನ್ನು ಆದ್ಯತೆ ನೀಡುವುದು ತುಂಬಾ ಅಪಾಯಕಾರಿ ಅಭ್ಯಾಸ ಎಂದು ನಾನು ನಂಬುತ್ತೇನೆ. ಇದು ನಮ್ಮ ಸಾರ್ವಭೌಮತ್ವದ ಆಕ್ರಮಣವೂ ಆಗಿದೆ. ಏಕೆಂದರೆ ಬಿಬಿಸಿ ಬ್ರಿಟಿμï ಬೆಂಬಲಿತ ಚಾನಲ್ ಆಗಿದೆ. ಪೂರ್ವಾಗ್ರಹದ ಸುದೀರ್ಘ ಇತಿಹಾಸವನ್ನು ಹೊಂದಿದೆ. ಅμÉ್ಟೀ ಅಲ್ಲ, ಜಾಕ್ ಸ್ಟ್ರಾ ಎಂಬವ ಇರಾಕ್ ಯುದ್ಧದ ಹಿಂದಿನ ಮೆದುಳು" ಎಂದಿರುವರು.
ಏತನ್ಮಧ್ಯೆ, ಕೇರಳದಲ್ಲಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುವುದು ಎಂದು ಡಿವೈಎಫ್‍ಐ ಮತ್ತು ಯುವ ಕಾಂಗ್ರೆಸ್ ಸ್ಪಷ್ಟಪಡಿಸಿವೆ. ಮೋದಿ ಸರ್ಕಾರ ನಿμÉೀಧಿಸಿರುವ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವುದಾಗಿ ಡಿವೈಎಫ್‍ಐ ತನ್ನ ಅಧಿಕೃತ ಫೇಸ್‍ಬುಕ್ ಪುಟದ ಮೂಲಕ ಪ್ರಕಟಿಸಿದೆ. ಬಿಬಿಸಿ ಸಾಕ್ಷ್ಯಚಿತ್ರವನ್ನು ಕೇರಳದಲ್ಲಿ ಪ್ರದರ್ಶಿಸಲಾಗುವುದು ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಶಾಫಿ ಪರಂಬಿಲ್ ಹೇಳಿದ್ದಾರೆ.
ಚಾರಿತ್ರಿಕ ಸಂಗತಿಗಳು ಯಾವಾಗಲೂ ಸಂಘಪರಿವಾರ ಮತ್ತು ಮೋದಿಯ ಶತ್ರುಗಳ ಪಾಲಿಗೆ ಇರುತ್ತವೆ. ದ್ರೋಹ, ಕ್ಷಮೆಯಾಚನೆ, ನರಮೇಧದ ಜ್ಞಾಪನೆಗಳನ್ನು ಅಧಿಕಾರದಿಂದ ಮರೆಮಾಡಲು ಸಾಧ್ಯವಿಲ್ಲ ಎಂದು ಶಾಫಿ ಪರಂಬಿಲ್ ಹೇಳಿದರು. ಇಂದು ಮತ್ತು ನಾಳೆ ರಾಜ್ಯದ 200 ಕೇಂದ್ರಗಳಲ್ಲಿ ಪ್ರದರ್ಶನ ನಡೆಯಲಿದೆ ಎಂದು ಡಿವೈಎಫ್ಐ ಪ್ರಕಟಿಸಿದೆ.
ಇದೇ ವೇಳೆ ಕೇರಳದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶಿಸುವ ಕ್ರಮವನ್ನು ನಿಲ್ಲಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಕೇರಳದಲ್ಲಿ 2002ರ ಗುಜರಾತ್ ಗಲಭೆ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವ ಕ್ರಮಕ್ಕೆ ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಕೇಂದ್ರ ಸಚಿವ ವಿ.ಮುರಳೀಧರನ್ ಆಗ್ರಹಿಸಿದ್ದಾರೆ.
ದೆಹಲಿಯ ಜೆಎನ್‍ಯುನಲ್ಲಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುವುದು ಎಂದು ಎಡ ಸಂಘಟನೆಗಳು ಘೋಷಿಸಿವೆ. ಇದೇ ವೇಳೆ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಚಿತ್ರ ಪ್ರದರ್ಶನ ನಡೆಯಿತು. ಇದರ ವಿರುದ್ಧ ಎಬಿವಿಪಿ ದೂರು ದಾಖಲಿಸಿದೆ. ಇದೇ ವೇಳೆ, ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕಲಾದ ಸಾಕ್ಷ್ಯಚಿತ್ರವನ್ನು ಇಂಟರ್ನೆಟ್ ಆರ್ಕೈವ್‍ನಿಂದಲೂ ತೆಗೆದು ಪ್ರಚುರಪಡಿಸಲಾಗುತ್ತಿದೆ. ಕಾರಣಾಂತರಗಳಿಂದ ಸ್ಥಳಾಂತರಿಸಲಾಗಿದೆ ಎಂಬುದು ವಿವರಣೆ. ಏತನ್ಮಧ್ಯೆ, ಸಾಕ್ಷ್ಯಚಿತ್ರದ ಎರಡನೇ ಭಾಗವನ್ನು ಇಂದು ಬಿಬಿಸಿ ಬಿಡುಗಡೆ ಮಾಡಲಿದೆ.
ಮೋದಿ ಸಾಕ್ಷ್ಯಚಿತ್ರ ವಿವಾದ: ಕಾಂಗ್ರೆಸ್ ನಾಯಕ ಎ.ಕೆ. ಆಂಟನಿ ಅವರ ಪುತ್ರ ಅನಿಲ್ ಆಂಟೋನಿಯಿಂದ ವಿಭಿನ್ನ ನಿಲುವು
0
ಜನವರಿ 24, 2023