ಬದಿಯಡ್ಕ : ದೇಗುಲಗಳು ಆತ್ಮೋದ್ಧಾರಕ್ಕೆ ಪೂರಕ. ದೇಗುಲಗಳಲ್ಲಿ ಅನ್ನ, ಜ್ಞಾನ, ಭೂತ, ಪಿತೃ ಹಾಗೂ ಅತಿಥಿ ಎಂಬ ಪಂಚ ಯಜ್ಞಗಳು ನಡೆಯಬೇಕು. ಜಗತ್ತಿನ ಹಿತವೇ ದೇಗುಲಗಳ ಲಕ್ಷ್ಯ. ಭಗವಂತನದ ಆರಾಧನೆಯ ಸುಖ, ದುಡ್ಡು ಸಂಪಾದನೆಯಿಂದ ದೊರಕುವುದಿಲ್ಲ. ಅಯ್ಯಪ್ಪ ವ್ರತಧಾರಿಗಳು ಹಾಗೂ ಭಕ್ತಾದಿಗಳು ಶಬರಿಮಲೆಯಂತೆ ಬಡಗುಶಬರಿಮಲೆಗೂ ಆಗಮಿಸಬೇಕು ಎಂದು ಕೊಂಡೆವೂರಿನ ನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ಶನಿವಾರ ಉಬ್ರಂಗಳದ ಮಹಾದೇವ ಪಾರ್ವತಿ ಶಾಸ್ತಾರ ಕ್ಷೇತ್ರದ ಬ್ರಹ್ಮಕಲಶದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಭಕ್ತನ ರಕ್ಷಣೆಗೆ ಭಗವಂತ ಯಾವುದಾದರೂ ರೂಪದಲ್ಲಿ ಬರುತ್ತಾನೆ. ಭಕ್ತನಿಗೆ ಕಷ್ಟ ಬಂದರೂ ಆತನನ್ನು ಸೋಲಲು ಭಗವಂತ ಬಿಡುವುದಿಲ್ಲ. ದೃಢವಾದ ದೈವನಂಬಿಕೆಯೇ ಜಾಗೃತವಾಗಿ ಕ್ಷೇತ್ರದ ಉದ್ದಾರಕ್ಕೆ ಕಾರಣವಾಗುತ್ತದೆ. ಬಡಗು ಶಬರಿಮಲೆಗೆ ಅಯ್ಯಪ್ಪ ಭಕ್ತರು ನಿರಂತರವಾಗಿ ಬರುವಂತಾಗಲಿ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಡಾ ಯು. ಬಿ ಕುಣಿಕುಳ್ಳಾಯ ವಹಿಸಿದ್ದರು. ಪಯ್ಯನ್ನೂರಿನ ಬಾಲಕೃಷ್ಣ ಮಾಸ್ತರ್ ಧಾರ್ಮಿಕ ಭಾಷಣ ಮಾಡಿದರು. ಸಭೆಯಲ್ಲಿ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಜಗನ್ನಾಥ ರೈ ಪೆರಡಾಲ, ಪ್ರೊ.ಮಾಧÀವ ರಾವ್, ಎಸ್.ಎನ್. ಬದಿಯಡ್ಕ, ಡಾ ವೇಣುಗೋಪಾಲ ಕಳೆಯತ್ತೋಡಿ, ಅಶೋಕ ಕುಣಿಕುಳ್ಳಾಯ ಹುಬ್ಬಳ್ಳಿ, ಡಾ. ಸೂರ್ಯನಾರಾಯಣ ಕುಣಿಕುಳ್ಳಾಯ, ಅರವಿಂದ ಅಲೆವೂರಾಯ, ದಿನೇಶ್ ಕೊಕ್ಕಡ ಮೊದಲಾದವರು ಭಾಗವಹಿಸಿದ್ದರು. ರಾಜಶೇಖರ ಮಾಸ್ತರ್ ಪದ್ಮಾರ್ ಸ್ವಾಗತಿಸಿ, ವಿಶ್ವನಾಥನ್ ಬಳ್ಳಪದವು ವಂದಿಸಿದರು. ಉದಯ ಕುಮಾರ್ ಕಲ್ಲಕಟ್ಟ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಕೂಟ ಹಾಗೂ ಭಕ್ತಿಗಾನ ಮೇಳ ನಡೆಯಿತು.
ಅಯ್ಯಪ್ಪ ವ್ರತಧಾರಿಗಳು ಬಡಗುಶಬರಿಮಲೆ ದರ್ಶನಕ್ಕೆ ಕೊಂಡೆವೂರುಶ್ರೀ ಕರೆ: ಉಬ್ರಂಗಳ ದೇವಸ್ಥಾನದ ಬ್ರಹ್ಮಕಲಶ ಮಹೋತ್ಸವದ ಧಾರ್ಮಿಕ ಸಭೆ
0
ಜನವರಿ 01, 2023
Tags