ನವದೆಹಲಿ: ಭಾರತ ಮತ್ತು ಫ್ರಾನ್ಸ್ ನೌಕಾಪಡೆಯ 21ನೇ ಜಂಟಿ ಕವಾಯತು ಪಶ್ಚಿಮ ಸಮುದ್ರತೀರದಲ್ಲಿ ಸೋಮವಾರ ಆರಂಭಗೊಂಡಿದೆ ಎಂದು ನೌಕಾಪಡೆ ಹೇಳಿದೆ.
1993ರಲ್ಲಿ ಆರಂಭವಾದ ಈ ಜಂಟಿ ಕವಾಯತಿಗೆ 2001ರಲ್ಲಿ 'ವರುಣಾ' ಎಂದು ನಾಮಕರಣ ಮಾಡಲಾಯಿತು. ಇದು ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ಸಹಕಾರ ವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದೂ ಹೇಳಿಕೆಯಲ್ಲಿ ತಿಳಿಸಿದೆ.