ಕಾಸರಗೋಡು: ಕೋಟ್ಟಾಯಂನಲ್ಲಿ ಆಹಾರ ವಿಷಬಾಧೆಯಿಂದ ದಾದಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆಹಾರ ಸುರಕ್ಷಾ ವಿಭಾಗ ನಡೆಸುತ್ತಿರುವ ಕಾರ್ಯಾಚರಣೆ ಹಿನ್ನೆಲೆಯಲ್ಲಿ ನಗರದ ಜನರಲ್ ಆಸ್ಪತ್ರೆ ಕ್ಯಾಂಟೀನ್‍ಗೂ ಬೀಗ ಜಡಿಯಲಾಗಿದೆ. ಏಕಾಏಕಿ ಕ್ಯಾಂಟೀನ್ ಮುಚ್ಚುಗಡೆಗೊಳಿಸಿದ ಹಿನ್ನೆಲೆಯಲ್ಲಿ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದರೆ, ಕ್ಯಾಂಟೀನ್ ಗುತ್ತಿಗೆ ವಹಿಸಿಕೊಂಡಿರುವ ವ್ಯಕ್ತಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಾಸಿಕ ಭಾರಿ ಮೊತ್ತದ ಬಾಡಿಗೆ ನೀಡಬೇಕಾಗಿದ್ದು, ಕ್ಯಾಂಟೀನ್ ನಡೆಸಲು ಇರಿಸಿರುವ 2.60ಲಕ್ಷ ರೂ. ಠೇವಣಿಗೂ ಸಂಚಕಾರ ಉಂಟಾಗಿದೆ. ಈ ಹಿಂದೆ ಜನರಲ್ ಆಸ್ಪತ್ರೆಯ ಹೆರಿಗೆ ವಾರ್ಡನ್ನು ನವೀಕರಿಸಿ ಕ್ಯಾಂಟೀನ್ ಆಗಿ ಮಾರ್ಪಡಿಸಲಾಗಿದೆ. ಈ ಹಿಂದೆ ಸೊಸೈಟಿಯೊಂದು ಕ್ಯಾಂಟೀನ್ ನಡೆಸುತ್ತಿದ್ದರೆ, ನಂತರ ನಗರದ ವ್ಯಕ್ತಿಯೊಬ್ಬರು ಗುತ್ತಿಗೆ ವಹಿಸಿಕೊಂಡಿದ್ದು, ಅಲ್ಪ ಕಾಲದಲ್ಲೇ ಈ ಸಂಕಷ್ಟ ಎದುರಾಗಿದೆ.
ಕ್ಯಾಂಟೀನ್ ನಡೆಸಲು ಲೈಸನ್ಸ್‍ಗಾಗಿ ನಗರಸಭೆಗೆ ತೆರಳಿದಾಗ, ಈ ಹಿಂದೆ ಕ್ಯಾಂಟೀನ್ ಲೈಸನ್ಸ್ ನವೀಕರಿಸದಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಕ್ಯಾಂಟೀನ್ ಮುಚ್ಚುಗಡೆಗೆ ಆದೇಶಿಸದೆ. ಇದರಿಂದ ಗುತ್ತಿಗೆದಾರ, ಆಸ್ಪತ್ರೆ ಸಿಬ್ಬಂದಿ ಹಾಗೂ ರೋಗಿಗಳು ಸಮಸ್ಯೆ ಎದುರಿಸುವಂತಾಗಿದೆ.
ನವೀಕರಿಸದ ಕಟ್ಟಡ ಲೈಸನ್ಸ್: ಆಸ್ಪತ್ರೆ ಕ್ಯಾಂಟೀನ್ ಮುಚ್ಚುಗಡೆ
0
ಜನವರಿ 05, 2023