ಕೋಝಿಕ್ಕೋಡ್: ಕೇರಳ ರಾಜ್ಯ 61ನೇ ರಾಜ್ಯ ಕಲೋತ್ಸವ ಕೋಝಿಕ್ಕೋಡ್ ನಲ್ಲಿ ಆರಂಭವಾಗಿದೆ.
ಕೋಝಿಕ್ಕೋಡ್ ನಗರ ಉತ್ಸವದ ಹಿನ್ನೆಲೆಯಲ್ಲಿ ವರ್ಣಮಯವಾಗಿದೆ.
ಶಿಕ್ಷಣ ಸಚಿವ ವಿ. ಶಿವಂಕುಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಲೋತ್ಸವವನ್ನು ಉದ್ಘಾಟಿಸಿದರು.
ಮಹಮ್ಮದ್ ಅನೀಶ್, ಮೇಯರ್ ಬೀನಾ ಫಿಲಿಪ್, ಸ್ಪೀಕರ್ ಎ.ಎನ್. ಶಂಸೀರ್, ಸಚಿವರಾದ ಪಿಎ
ಮುಹಮ್ಮದ್ ರಿಯಾಝ್, ಎ.ಕೆ. ಶಶೀಂದ್ರನ್, ಅಹಮದ್ ದೇವರಕೋವಿಲ್ ಮತ್ತಿತರರು ಸಮಾರಂಭದಲ್ಲಿ
ಭಾಗವಹಿಸಿದ್ದರು. ಮುಖ್ಯ ವೇದಿಕೆ ವೆಸ್ಟ್‍ಹಿಲ್ ವಿಕ್ರಂ ಮೈದಾನದಲ್ಲಿ ಬೆಳಗ್ಗೆ
8.30ಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಕೆ.ಜೀವನ್‍ಬಾಬು ಧ್ವಜಾರೋಹಣ
ನೆರವೇರಿಸಿದರು. ಬಳಿಕ ಉದ್ಘಾಟನಾ ಸಮಾರಂಭ ನಡೆಯಿತು.
61ನೇ ರಾಜ್ಯ ಶಾಲಾ
ಕಲೋತ್ಸವ ಅಖಂಡ ಕೇರಳದ ಇತಿಹಾಸದಷ್ಟು ಹಳೆಯದು ಎಂದು ಮುಖ್ಯಮಂತ್ರಿ ಹೇಳಿದರು. ಶಾಲಾ
ಕಲಾ ಉತ್ಸವ ಬದಲಾಗುತ್ತಿರುವ ಕೇರಳಕ್ಕೆ ಹಿಡಿದ ಕನ್ನಡಿ. ಆ ಅರ್ಥದಲ್ಲಿ, ಕಲೋತ್ಸವವು
ಕಲಾ ಪ್ರದರ್ಶನಗಳನ್ನು ಪ್ರದರ್ಶಿಸುವ ವೇದಿಕೆಯಾಗಿರದೆ, ಹೊಸ ಪೀಳಿಗೆಯು ಸಾಮಾಜಿಕ
ವಿಮರ್ಶೆ ಮತ್ತು ಹೊಸತನದ ಪ್ರಪಂಚದ ಅವಕಾಶಗಳ ಮಧ್ಯೆ ವಿವಿಧ ಕಲೆಗಳನ್ನು ಬಳಸುವ
ಸಾಂಸ್ಕøತಿಕ ಕೂಟವಾಗಿ ಮಾರ್ಪಡುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಸ್ಪರ್ಧೆಗಿಂತ ಹೆಚ್ಚಾಗಿ ಸಾಂಸ್ಕೃತಿಕ ಕೂಟವಾಗಿದೆ. ಇದು ಸೋಲು-ಗೆಲುವಿನ ಅಂತಿಮ
ವೇದಿಕೆಯಲ್ಲ. ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಎಂದು ಗಮನಿಸಬೇಕು. ಪೋಷಕರು ಅವುಗಳನ್ನು
ಆನಂದಿಸುವಂತಾಗಬೇಕು. ಕಲೋತ್ಸವ ವೇದಿಕೆಗಳು ವಿವಿಧ ಪ್ರದೇಶಗಳಿಂದ ಆಗಮಿಸುವ ಕಲೆಗಳ
ಪುನಶ್ಚೇತನ ವೇದಿಕೆಯೂ ಆಗಿದೆ ಎಂದರು.
ಮುಖ್ಯಮಂತ್ರಿಗಳಿಂದ ರಾಜ್ಯ ಶಾಲಾ ಕಲೋತ್ಸವ ಉದ್ಘಾಟನೆ
0
ಜನವರಿ 03, 2023