ಕಾಸರಗೋಡು: ಅತಿಯಾದ ಭಾರ ಹೇರಿಕೊಂಡು ಸಂಚರಿಸುತ್ತಿದ್ದ 10ಲಾರಿಗಳನ್ನು ವಿಜಿಲೆನ್ಸ್ ತಂಡ ವಶಪಡಿಸಿಕೊಂಡಿದೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಭಾರ ಹೇರಿಕೊಂಡು ಸಂಚರಿಸುತ್ತಿರುವ ಲಾರಿಗಳ ಪತ್ತೆಗಾಗಿ ವಿಜಿಲೆನ್ಸ್ ತಂಡ ರಾಜ್ಯಾದ್ಯಂತ ಆಯೋಜಿಸಿದ್ದ 'ಆಪರೇಶನ್ ಓವರ್‍ಲೋಡ್'ವಿಶೇಷ ಕಾರ್ಯಾಚರಣೆಯನ್ವಯ ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ವಿಜಿಲೆನ್ಸ್ ಕಾರ್ಯಪಡೆ ನಡೆಸಿದ ದಾಳಿಯಲ್ಲಿ ಎಂಟು ಟೋರೆಸ್ ಹಾಗೂ ಎರಡು ಟಿಪ್ಪರ್ ಲಾರಿ ವಶಪಡಿಸಿಕೊಳ್ಳಲಾಗಿದೆ.ವಿಜಿಲೆನ್ಸ್ ಡಿ.ವೈ.ಎಸ್.ಪಿ ಕೆ.ವಿ ವೇಣುಗೋಪಾಲ್, ಇನ್ಸ್‍ಪೆಕ್ಟರ್ ಸಿಬಿ ಥಾಮಸ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ವಶಪಡಿಸಿಕೊಮಡಿರುವ ಹತ್ತೂ ಲಾರಿಗಳಲ್ಲಿ 15ರಿಂದ 201ನ್ ಭಾರ ಹೇರಲಾಗಿತ್ತು. ನಿಗದಿತ ಭಾರಕ್ಕಿಂತ ಹೆಚ್ಚಿನ ಸರಕು ಇದರಲ್ಲಿ ಒಳಗೊಂಡಿತ್ತು. ಅತಿಯಾದ ಭಾರದೊಂದಿಗೆ ಸಂಚರಿಸುವ ಇಂತಹ ವಾಹನಗಳಿಂದ ಅಪಘಾತ ಮರುಕಳಿಸುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯಾಚರಣೆ ಮುಂದುವರಿಯಲಿರುವುದಾಗಿ ವಇಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
'ಆಪರೇಶನ್ ಓವರ್ ಲೋಡ್': ಜಿಲ್ಲೆಯ ವಿವಿಧೆಡೆ ಹತ್ತು ಲಾರಿಗಳ ವಶ
0
ಜನವರಿ 19, 2023
Tags