ಕಾಸರಗೋಡು: ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಪ್ರತಿಭಾನ್ವಿತ ಕಲಾವಿರ ಬಾಳು ಮತ್ತಷ್ಟು ಪ್ರಜ್ವಲಿಸುವಂತಾಗಲಿ ಎಂದು ಖ್ಯಾತ ವೈದ್ಯ ಡ. ಅನಂತ ಕಾಮತ್ ತಿಳಿಸಿದ್ದಾರೆ. ಅವರು ಕಾಸರಗೋಡು ಶ್ರೀರಾಮಪೇಟೆಯ ಶ್ರೀ ವರದರಾಜ ವೆಂಕಟ್ರಮಣ ದೇವಸ್ಥಾನದಲ್ಲಿ ಶ್ರೀಕೋದಂಡರಾಮ ದೇವರ ಮೂಲ ಪ್ರತಿಷ್ಠೆಯ 250ನೇ ವರ್ಷಾಚರಣೆ ಪೂರ್ವಭಾವಿಯಾಗಿ ದೇವಸ್ಥಾನದಲ್ಲಿ ಆಯೋಜಿಸಲಾದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಜಗದೀಶ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಮೊಕ್ತೇಸರರಾದ ಸಿ. ರವಿಶಂಕರ ಕಾಮತ್, ವಿ.ಗಣೇಶ್ ಪ್ರಭು, ಜಿ.ಎಸ್.ಬಿ ಸೇವಾ ಸಂಘದ ಅಧ್ಯಕ್ಷ ಕೆ. ಕೃಷ್ಣ ಮಲ್ಯ, ಮಹಿಳಾ ಸಂಘದ ಅಧ್ಯಕ್ಷೆ ಕೆ. ಗೀತಾರಾಮಚಂದ್ರ ಶೆಣೈ, ಪ್ರತಿಷ್ಠಾ ವರ್ಧಂತಿ ಆಚರಣೆ ಸಮಿತಿ ಅಧ್ಯಕ್ಷ ಎಂ. ಅಶೋಕ ಶೆಣೈಉಪಸ್ಥಿತರಿದ್ದರು.
ಸಮಿತಿ ಕಾರ್ಯದರ್ಶಿ ಎ.ರವೀಂದ್ರ ರಾವ್ ಸ್ವಾಗತಿಸಿದರು. ರಾಮದಾಸ ಶೆನೈ ಕಾರ್ಯಕ್ರಮ ನಿರೂಪಿಸಿದರು. ಜತೆಕಾರ್ಯದರ್ಶಿ ಕೆ. ಗಿರಿಧರ ಕಾಮತ್ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಕೃಷ್ಣೇಂದ್ರ ವಾಡೇಕರ್ ಹುಬ್ಬಳ್ಳಿ ಮತ್ತು ಸಈಮಾ ರಾಯ್ಕರ್ ಬೆಂಗಳೂರು ಅವರಿಂದ ಭಜನ್ ಕಾರ್ಯಕ್ರಮ ನಡೆಯಿತು. ಹಾರ್ಮೋನಿಯಂನಲ್ಲಿ ಸುಪ್ರೀತ್ ಶೆಣೈ ಉಡುಪಿ, ತಬಲಾದಲ್ಲಿ ಶ್ರೀದತ್ತ ಪ್ರಭು ಮಂಗಳೂರು, ಪಕ್ವಾಸ್‍ನಲ್ಲಿ ಉಪೇಂದ್ರ ಮಲ್ಯ, ತಾಳದಲ್ಲಿ ರಾಮನಾಥ ಕಿಣಿ ಮಂಗಳೂರು ಸಾಥ್ ನೀಡಿದರು.
ಶ್ರೀ ವರದರಾಜ ವೆಂಕಟ್ರಮಣ ದೇವಸ್ಥಾನದಲ್ಲಿ ಮೂಲ ಪ್ರತಿಷ್ಠಾ ವರ್ಷಾಚರಣೆ-ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಚಾಲನೆ
0
ಜನವರಿ 18, 2023
Tags