ಬದಿಯಡ್ಕ: ರೋಟರಿ ಬದಿಯಡ್ಕ ಇವರು ವಾರ್ಷಿಕವಾಗಿ ಕೊಡಮಾಡುವ ವೃತ್ತಿಪರ ಸಾಧÀನಾ ಪ್ರಶಸ್ತಿ ಪ್ರದಾನ ಸಮಾರಂಭ ಬದಿಯಡ್ಕ ರೋಟರಿ ಸಭಾ ಭÀವನದಲ್ಲಿ ಶುಕ್ರವಾರ ಜರಗಿತು. ಬದಿಯಡ್ಕ ರೋಟರಿ ಅಧ್ಯಕ್ಷ ಬಿ. ರಾಧಾಕೃಷ್ಣ ಪೈ ಅಧ್ಯಕ್ಷತೆ ವಹಿಸಿ ಮಾತನಾಡಿ ಬದಿಯಡ್ಕದಲ್ಲಿ ಪ್ರಾರಂಭಗೊಂಡ ನಮ್ಮ ಸಂಘಟನೆಯು ಮುಂದಿನ ದಿನಗಳಲ್ಲಿ ಅನೇಕ ಜನಪರ ಕಾರ್ಯಗಳನ್ನು ಕೈಗೊಂಡು ನಾಡಿನ ಒಳಿತಿಗಾಗಿ ಸೇವಾಕಾರ್ಯಗಳನ್ನು ಕೈಗೊಳ್ಳಲಿದೆ ಎಂದರು.
ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಅನೇಕ ವರ್ಷಗಳಿಂದ ಬದಿಯಡ್ಕ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಬೇಬಿ ಸುಕುಮಾರನ್ ಅವರಿಗೆ ವೃತ್ತಿಪರ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಸಿದ್ಧ ಸರ್ಕಾರಿ ಪಶುವೈದ್ಯ ರೋಟೇರಿಯನ್ ಡಾ. ಸುನಿಲ್ ಕುಮಾರ್ ಬದಿಯಡ್ಕ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಪ್ರಶಸ್ತಿ ಪ್ರದಾನಗೈದರು. ಪ್ರಶಸ್ತಿಯನ್ನು ಸ್ವೀಕರಿಸಿ ಬೇಬಿ ಸುಕುಮಾರನ್ ಮಾತನಾಡಿ ತಮ್ಮ ಸೇವಾವಯಲ್ಲಿ ಪುಟಾಣಿ ಮಕ್ಕಳೊಂದಿಗೆ ಬೆರೆತ ಸುಮಧುರ ಕ್ಷಣಗಳನ್ನು ಹಂಚಿಕೊಂಡು ತನ್ನನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದ ರೋಟರಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯದರ್ಶಿ ವೈ. ರಾಘವೇಂದ್ರ ಪ್ರಸಾದ್ ನಾಯಕ್ ಪ್ರಶಸ್ತಿ ಪುರಸ್ಕøತರ ಪರಿಚಯ ಮಾಡಿದರು. ರೋಟೇರಿಯನ್ ಸದಸ್ಯರುಗಳಾದ ವಿಜಯನ್ ಅಂಬನಾಟ್, ಬಿ. ಗೋಪಾಲಕೃಷ್ಣ ಕಾಮತ್, ರಾಜೇಶ್ ಚಂಬಲ್ತಿಮಾರ್, ದೇವಿದಾಕ್ಷನ್ ಬದಿಯಡ್ಕ, ಯತಿಕಾ ನಾಯಕ್ ಬದಿಯಡ್ಕ ಮಾತನಾಡಿದರು. ಕೋಶಾಧಿಕಾರಿ ಬಿ.ಕೇಶವ ರೋಟರಿ ಪ್ರಾರ್ಥನೆ ಹಾಡಿದರು. ಸದಸ್ಯ ವಕೀಲ ನವೀನ್ ಬನಾರಿ ಸ್ವಾಗತಿಸಿ, ಕಾರ್ಯದರ್ಶಿ ವಂದಿಸಿದರು.
ರೋಟರಿ ಬದಿಯಡ್ಕ ವತಿಯಿಂದ ಅಂಗನವಾಡಿ ಸಹಾಯಕಿಗೆ ವೃತ್ತಿಪರ ಸಾಧÀನಾ ಪ್ರಶಸ್ತಿ
0
ಜನವರಿ 15, 2023
Tags