ಕಾಸರಗೋಡು: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ ಕಾಸರಗೋಡು ಬ್ಲಾಕ್ ಪಂಚಾಯತ್ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಹಿಳಾ ರಕ್ಷಣಾ ಕಛೇರಿಯ ಮಾರ್ಗದರ್ಶನದಲ್ಲಿ ಲಿಂಗ ಜಾಗೃತಿ ವಿಚಾರ ಸಂಕಿರಣ ನಡೆಯಿತು.
ಕಾಸರಗೋಡು ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಅಶ್ರಫ್ ಅಲಿ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಸಮಾನತೆಗೆ ಇಡೀ ಸಮಾಜ ಮುಂದೆಬರಬೇಕು, ಜತೆಗೆ ಹೆಣ್ಣು ಮಗುವಿನ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಪೆÇೀಷಕರು ಪ್ರಯತ್ನಿಸಬೇಕು ಎಂದು ತಿಳಿಸಿದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿ.ಎಸ್.ಶಿಮ್ನಾ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಬ್ಲಾಕ್ ಪಂಚಾಯತ್ ಬಿಡಿಒ ವಿ.ಬಿ.ಬಿಜು, ವೇದವೇದ್ಯಾಮೃತ ಚೈತನ್ಯ, ಸುಲೈಮಾನ್ ಕರಿವೆಳ್ಳೂರು, ಜೋಸಿ ಜೋಸ್, ಸಿಡಿಪಿಒ ಕೆ.ಜಯಶ್ರೀ ಉಪಸ್ಥಿತರಿದ್ದರು. ಬಾಲ್ಯ ವಿವಾಹ ನಿಷೇಧ ಎಂಬ ವಿಷಯದಲ್ಲಿ ಕುರಿತು ಸಹಾಯಕ ಕಾನೂನು ನೆರವು ರಕ್ಷಣಾ ಮಂಡಳಿ ವಕೀಲ ಜೆಬಿನ್ ಥಾಮಸ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಾರಿಗೊಳಿಸಿರುವ ವಿವಿಧ ಯೋಜನೆಗಳ ಕುರಿತು ಜಿಲ್ಲಾ ಪಂಚಾಯಿತಿ ಸಮುದಾಯ ಮಹಿಳಾ ಸಂಚಾಲಕಿ ಸುನಾ ಎಸ್.ಚಂದ್ರನ್ ತರಗತಿ ನಡೆಸಿದರು. ಜಿಲ್ಲಾ ಮಹಿಳಾ ರಕ್ಷಣಾಧಿಕಾರಿ ಪಿ.ಜ್ಯೋತಿ ಸ್ವಾಗತಿಸಿದರು. ಎ.ಗಿರೀಶ್ ಕುಮಾರ್ ವಂದಿಸಿದರು.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ: ಲಿಂಗ ಸಮಾನತೆ ಕುರಿತು ಜಾಗೃತಿ, ವಿಚಾರ ಸಂಕಿರಣ
0
ಜನವರಿ 25, 2023