ಕಾಸರಗೋಡು: ಹನ್ನೆರಡು ದಿವಸಗಳ ಹಿಂದೆ ಕಾಸರಗೋಡಿನಿಂದ ನಾಪತ್ತೆಯಾಘಿದ್ದ ಜೋಡಿಯ ಮೃತದೇಹ ಗುರುವಾಯೂರಿನ ವಸತಿಗೃಹದ ಕೊಠಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾಸರಗೋಡು ಕಳ್ಳಾರ್ ನಿವಾಸಿ ಮಹಮ್ಮದ್ ಶೆರೀಫ್ ಹಾಗೂ ನೆರೆಮನೆ ನಿವಾಸಿ ಸಿಂಧು ಆತ್ಮಹತ್ಯೆಗೆ ಶರಣಾದವರು. ಆಟೋರಿಕ್ಷಾ ಚಾಲಕನಾಗಿದ್ದ ಮಹಮ್ಮದ್ ಹಾಗೂ ಗೃಹಿಣಿಯಾಗಿದ್ದ ಸಿಂಧು ಜ. 7ರಂದು ನಾಪತ್ತೆಯಾಗಿದ್ದರು. ಈ ಬಗ್ಗೆ ರಾಜಾಪುರ ಠಾಣೆಯಲ್ಲಿ ಕೇಸು ದಾಖಲಾಗಿತ್ತು.
ಇಬ್ಬರೂ ಈ ಹಿಂದೆ ವಿವಾಹಿತರಾಗಿ ಮಕ್ಕಳನ್ನು ಹೊಂದಿದವರಾಗಿದ್ದು, ನಂತರ ಇವರಿಬ್ಬರೂ ಪರಸ್ಪರ ಪ್ರೀತಿಸಿ ಮಕ್ಕಳನ್ನು ತೊರೆದು ಪರಾರಿಯಾಗಿದ್ದರು. ಸಿಂಧೂ ಇಬ್ಬರು ಹಾಗೂ ಮಹಮ್ಮದ್ ಶೆರೀಫ್ ಮೂರು ಮಂದಿ ಮಕ್ಕಳನ್ನು ಹೊಂದಿದ್ದಾರೆ. ಎರಡೂ ಕುಟುಂಬದವರಿಗೂ ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದ ಬಗ್ಗೆ ಮಾಹಿತಿಯಿತ್ತೆನ್ನಲಾಗಿದೆ. ಈ ಮಧ್ಯೆ ಇಬ್ಬರೂ ತಮ್ಮ ಪತಿ, ಪತ್ನಿ, ಮಕ್ಕಳನ್ನು ಬಿಟ್ಟು ಪರಾರಿಯಾಗಿದ್ದಾರೆ.
ಇಬ್ಬರೂ ಬುಧವಾರ ಗುರುವಾಯೂರಿನ ವಸತಿಗೃಹದಲ್ಲಿ ಕೊಠಡಿ ಪಡೆದಿದ್ದು, ಗುರುವಾರ ಕೊಠಡಿ ತೆರವುಗೊಳಿಸುವ ಸಮಯ ಕಳೆದರೂ ಆಗಮಿಸಿದ ಹಿನ್ನಲೆಯಲ್ಲಿ ತಪಾಸಣೆ ನಡೆಸಿದಾಗ ಮೃತದೇಹ ಕಂಡುಬಂದಿದೆ. ವಸತಿಗೃಹದಲ್ಲಿ ನೀಡಿದ ವಿಳಾಸವನ್ನು ಸಂಪರ್ಕಿಸಿದಾಗ ಮಾಹಿತಿ ಲಭಿಸಿದೆ.
ಕಾಸರಗೋಡಿನಿಂದ ನಾಪತ್ತೆಯಾದವರು ಗುರುವಾಯೂರಿನ ವಸತಿಗೃಹದಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣು
0
ಜನವರಿ 20, 2023