ಕುಂಬಳೆ: ಭಾರತೀಯ ಜನತಾ ಪಕ್ಷ ಕುಂಬಳೆ ಮಂಡಲ ಸಮಿತಿಯ ಆಶ್ರಯದಲ್ಲಿ ರಾಜ್ಯ ಸರ್ಕಾರದ ಜನವಿರೋಧಿ ಧೋರಣಗಳೊಂದಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಬುಡಮೇಲುಗೊಳಿಸಲು ಪ್ರಯತ್ನಿಸುತ್ತಿರುವ ಕುತಂತ್ರಗಳಿಗೆದುರಾಗಿ ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ ಅವರ ನೇತೃತ್ವದಲ್ಲಿ ಜನವರಿ 26 ರಿಂದ 28 ರವರೆಗೆ ಹಮ್ಮಿಕೊಂಡಿರುವ ಕುಂಬಳೆ ಮಂಡಲ ಪಾದಯಾತ್ರೆ ಎರಡನೇ ದಿನದ ಕಾರ್ಯಕ್ರಮ ಸೀತಂಗೋಳಿ ಪೇಟೆಯಲ್ಲಿ ಬಿಜೆಪಿ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ. ಬಾಲಕೃಷ್ಣ ಶೆಟ್ಟಿ ಅವರಿಂದ ಉದ್ಘಾಟನೆಗೊಂಡು ಸೂರಂಬೈಲು ನಾಯ್ಕಾಪು- ಕೋಟೆಕ್ಕಾರ್ - ಕಂಚಿಕಟ್ಟೆ ಮೂಲಕ ಸಾಗಿ ಕುಂಬಳೆ ಪೇಟೆಯಲ್ಲಿ ಸಮಾರೋಪಗೊಂಡಿತು.
ವಿವಿಧ ಕೇಂದ್ರಗಳಲ್ಲಿ ಬೂತ್ ಸಮಿತಿಗಳು ಆಶ್ರಯದಲ್ಲಿ ಪಾದಯಾತ್ರೆಗೆ ಅಭೂತಪೂರ್ವ ಸ್ವಾಗತ ನೀಡಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಉತ್ತರ ವಲಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ರೈ, ರಾಜ್ಯ ಸಮಿತಿ ಸದಸ್ಯ ಕೋಳಾರು ಸತೀಶ್ಚಂದ್ರ ಭಂಡಾರಿ, ಯುವಮೋರ್ಚಾ ರಾಜ್ಯ ಸೆಲ್
ಸಂಯೋಜಕ ಅಂಜು ಜೋಸ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಸಂತಕುಮಾರ್ ಮಯ್ಯ, ಅನಿಲ್ ಮಣಿಯಂಪಾರೆ, ಜಿಲ್ಲಾ ಕಾರ್ಯದರ್ಶಿ ಪುಷ್ಪ ಅಮೆಕ್ಕಳ, ಜಿಲ್ಲಾ ಸಮಿತಿ ಸದಸ್ಯ ಮುರಳಿಧರ ಯಾದವ್ ನಾಯ್ಕಾಪು, ಮಂಡಲ ಸಮಿತಿ ಉಪಾಧ್ಯಕ್ಷರುಗಳಾದ ಪ್ರೇಮಲತಾ ಗಟ್ಟಿ, ನಾರಾಯಣ ನಾಯ್ಕ, ರಮೇಶ್ ಭಟ್ ಕುಂಬಳೆ, ಪಂಚಾಯತಿ ಸಮಿತಿ ಅಧ್ಯಕ್ಷರುಗಳಾದ ಜಯಂತ ಪಾಟಾಳಿ, ಸುಜಿತ್ ರೈ ಕುಂಬಳೆ ಮುಂತಾದ ನೇತಾರರು, ಜನಪ್ರತಿನಿಧಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.