HEALTH TIPS

ಬಿಕ್ಕಟ್ಟಿನಲ್ಲಿ ಜಗತ್ತು, ಸುಸ್ಥಿರ ಪರಿಹಾರ ಅಗತ್ಯ: ಪ್ರಧಾನಿ ಮೋದಿ

 

            ನವದೆಹಲಿ: 'ಜಗತ್ತು ಬಿಕ್ಕಟ್ಟಿನ ಸ್ಥಿತಿಯಲ್ಲಿದೆ. ಇದು ಇನ್ನೂ ಎಷ್ಟು ಕಾಲದವರೆಗೆ ಇರಲಿದೆ ಎಂದು ಹೇಳಲಾಗದು. ಎಲ್ಲಾ ಸಮಸ್ಯೆಗಳಿಗೆ ಸರಳ ಮತ್ತು ಸುಸ್ಥಿರವಾದ ಪರಿಹಾರವನ್ನು ಕಂಡುಕೊಳ್ಳುವುದು ಈಗಿನ ತುರ್ತು' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರವಾರ ಅಭಿಪ್ರಾಯಪಟ್ಟರು.

                ಏಷ್ಯಾ, ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕ ಖಂಡಗಳ ದೇಶಗಳ ಧ್ವನಿಯನ್ನು ಜಗತ್ತಿನ ಮುಂದಿಡಲು ಭಾರತವು ಎರಡು ದಿನಗಳ 'ವಾಯ್ಸ್‌ ಆಫ್‌ ಗ್ಲೋಬಲ್‌ ಸೌತ್‌ ಸಮಿಟ್‌'ಅನ್ನು ಆಯೋಜಿಸಿದೆ. ಈ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು ಉದ್ಘಾಟನಾ ಭಾಷಣ ಮಾಡಿದರು.

                 'ನಾನು ಆಶಾವಾದಿಯಾಗಿದ್ದೇನೆ. ನಾವೆಲ್ಲರೂ ಒಂದು ಗೂಡಿ ಹೊಸದಾದ ಮತ್ತು ಕ್ರಿಯಾಶೀಲವಾದ ದಾರಿಯೊಂದನ್ನು ಕಂಡುಕೊಳ್ಳಲಿದ್ದೇವೆ ಎಂಬುದರ ಕುರಿತು ನನಗೆ ಆತ್ಮವಿಶ್ವಾಸವಿದೆ' ಎಂದರು.

                 'ಯುದ್ಧ, ಸಂಘರ್ಷ, ಭಯೋತ್ಪಾದನೆ ಹಾಗೂ ರಾಜಕೀಯ ಒತ್ತಡಗಳಿಂದ ಕೂಡಿದ ಅತ್ಯಂತ ಕಷ್ಟದ ವರ್ಷವನ್ನು ಕಳೆದು ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಈ ಕಾಲಘಟ್ಟದಲ್ಲಿ ಹೆಚ್ಚುತ್ತಿರುವ ಇಂಧನ, ರಸಗೊಬ್ಬರ ಹಾಗೂ ಆಹಾರದ ಬೆಲೆ, ಹವಾಮಾನ ವೈಪರಿತ್ಯದಿಂದ ಉಂಟಾಗುತ್ತಿರುವ ನೈಸರ್ಗಿಕ ವಿಪತ್ತುಗಳು, ಜೊತೆಗೆ ಕೋವಿಡ್‌ನಿಂದ ಆರ್ಥಿಕತೆಯ ಮೇಲಾಗಿರುವ ಪರಿಣಾಮ ಹೀಗೆ ಈ ಎಲ್ಲವೂ ಜಗತ್ತು ಬಿಕ್ಕಟ್ಟಿನ ಸ್ಥಿತಿಯನ್ನು ಸಾರುತ್ತಿವೆ. ಈ ಸ್ಥಿತಿಯು ಇನ್ನೂ ಎಷ್ಟು ದಿನಗಳ ವರೆಗೆ ಇರಲಿದೆ ಎಂದು ಹೇಳಲಾಗದು' ಎಂದರು.

                    'ಈ ದೇಶಗಳು ತಮ್ಮ ಅವಲಂಬನೆ ಪ್ರವೃತ್ತಿಯನ್ನು ಬಿಡಬೇಕು ಎಂದರು. ಹವಾಮಾನ ವೈಪರಿತ್ಯ, ಉಕ್ರೇನ್‌ ಯುದ್ಧವನ್ನು ಪ್ರಸ್ತಾಪಿಸಿದ ಅವರು, 'ನಮ್ಮದಲ್ಲದ ತಪ್ಪುಗಳಿಗೆ ನಾವು ಅನುಭವಿಸುತ್ತಿರುವ ಕೆಟ್ಟ ಪರಿಣಾಮಗಳಿಂದ ತಪ್ಪಿಸಿಕೊಳ್ಳಬೇಕು' ಎಂದರು.

                              ಪ್ರಧಾನಿ ಮೋದಿ ಮಾತುಗಳು
* ನಾಲ್ಕನೇ ಒಂದರಷ್ಟು ಜನಸಂಖ್ಯೆಯು ಜಗತ್ತಿನ ದಕ್ಷಿಣ ಭಾಗದ ದೇಶಗಳಲ್ಲಿದೆ. ಬೇರೆ ಎಲ್ಲರಂತೆ ನಮಗೂ ಸಮಾನ ಧ್ವನಿ ಇದೆ. ಆದ್ದರಿಂದ ಭವಿಷ್ಯದಲ್ಲಿ ಈ ದೇಶಗಳ ಪಾಲು ಹೆಚ್ಚಿರಲಿದೆ

* ಭಾರತವು ಈ ವರ್ಷದ ಜಿ 20 ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ಜಗತ್ತಿನ ದಕ್ಷಿಣ ಭಾಗದ ದೇಶಗಳ ಧ್ವನಿಯನ್ನು ಮತ್ತಷ್ಟು ಎತ್ತರಿಸುವುದು ಭಾರತದ ಧ್ಯೇಯ

* 20ನೇ ಶತಮಾನದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ಜಗತ್ತಿನ ಆರ್ಥಿಕತೆಯನ್ನು ನಿಯಂತ್ರಿಸುತ್ತಿದ್ದವು. ಆದರೆ, ಇಂಥ ಹಲವು ದೇಶಗಳು ಇಂದು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿವೆ

* 21ನೇ ಶತಮಾನದಲ್ಲಿ ಜಗತ್ತಿನ ಅಭಿವೃದ್ಧಿಗೆ ಜಗತ್ತಿನ ದಕ್ಷಿಣ ಭಾಗದ ದೇಶಗಳು ಮುಖ್ಯ ಪಾತ್ರವಹಿಸಲಿವೆ. ನಾವು ಒಗ್ಗೂಡಿ ಕೆಲಸ ಮಾಡಿದರೆ, ಜಾಗತಿಕ ಮಟ್ಟದ ಕಾರ್ಯಸೂಚಿಯನ್ನು ಸಿದ್ಧಪಡಿಸಬಹುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries