ಬದಿಯಡ್ಕ: ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಸೋಸಿಯೇಶನ್ ಕಳೆದ ಅಕ್ಟೋಬರ್‍ನಲ್ಲಿ ನಡೆಸಿದ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ನವಜೀವನ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಚಿತ್ತರಂಜನ್.ಕೆ. ಉತ್ತೀರ್ಣನಾಗಿದ್ದಾನೆ. ಈತ ಬಹುಮುಖ ಪ್ರತಿಭಾನ್ವಿತನಾಗಿದ್ದು ಕಲೋತ್ಸವದ ಯಕ್ಷಗಾನ, ಗಣಿತ ಮೇಳದಲ್ಲೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಇದೇ ಶಾಲೆಯ ಆಧ್ಯಾಪಿಕೆ ಜ್ಯೋತ್ಸ್ನಾ ಕಡಂದೇಲು ಹಾಗೂ ಹರೀಶ ಕುಮಾರ್ ಅವರ ಪುತ್ರ. ಇವನನ್ನು ಶಾಲಾ ವ್ಯವಸ್ಥಾಪಕರು, ಮುಖ್ಯೋಪಾಧ್ಯಾಯರು, ಶಿಕ್ಷಕವೃಂದ ಅಭಿನಂದಿಸಿದೆ.
ನವಜೀವನ ಶಾಲೆಯ ಸ್ಕೌಟ್ ವಿದ್ಯಾರ್ಥಿ ಚಿತ್ತರಂಜನ್ ರಾಜ್ಯಪುರಸ್ಕಾರಕ್ಕೆ ಆಯ್ಕೆ
0
ಜನವರಿ 01, 2023