ಮುಳ್ಳೇರಿಯ: ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯ ಪ್ಲಾಟಿನಂ ಜುಬಿಲಿ ಕಾರ್ಯಕ್ರಮದ ಲೋಗೋ ಬಿಡುಗಡೆ ಕ್ಷೇತ್ರ ಕಲಾ ಅಕಾಡೆಮಿಯ ಅಧ್ಯಕ್ಷÀ, ಸಂಗೀತ ರತ್ನಂ ಕಾಞಂಗಾಡ್ ರಾಮಚಂದ್ರನ್ ಉದ್ಘಾಟಿಸಿದರು. ಮಾಧ್ಯಮ ಸಮಿತಿ ಅಧ್ಯಕ್ಷ ಪಿ.ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪ್ರಾಂಶುಪಾಲೆ ಅನಿತಾ ವಿ.ವಿ ಸ್ವಾಗತಿಸಿದರು.
ವರ್ಷವಿಡೀ ನಡೆಯುವ ವಾರ್ಷಿಕೋತ್ಸವಕ್ಕೆ, ಆಶು ಕಾಞಂಗಾಡ್ ವಿನ್ಯಾಸಗೊಳಿಸಿದ ಲೋಗೋವನ್ನು ಆಯ್ಕೆ ಮಾಡಲಾಗಿದೆ. ಚಿತ್ರಕಲಾವಿದ ವಿನೋದ್ ಅಂಬಲತ್ತರ, ಪ್ರಸಿದ್ದ ಶಿಲ್ಪಿ ಚಿತ್ರನ್ ಕುಂಞÂ್ಞಮಂಗಲಂ ಮತ್ತು ಪಲ್ಲವ ನಾರಾಯಣನ್ ಅವರನ್ನೊಳಗೊಂಡ ತೀರ್ಪುಗಾರರ ತಂಡವು ಲೋಗೋವನ್ನು ಆಯ್ಕೆ ಮಾಡಿದೆ.
ಶಾಲಾ ವ್ಯವಸ್ಥಾಪಕ ಕೆ ವೇಣುಗೋಪಾಲನ್ ನಂಬಿಯಾರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಜಿತ್ ವಿ, ವಾರ್ಡ್ ಕೌನ್ಸಿಲರುಗಳಾದ ಎನ್. ಅಶೋಕ್ ಕುಮಾರ್, ಕುಸುಮಾ ಹೆಗಡೆ, ಮುಖ್ಯಶಿಕ್ಷಕ ವಿನೋದ್ ಕುಮಾರ್ ಮೇಲತ್, ಪಲ್ಲವ ನಾರಾಯಣನ್, ಎಂ.ಕೆ.ವಿನೋದ್ ಕುಮಾರ್, ಎಂ.ಗಂಗಾಧರನ್ ಮಾಸ್ತರ್ ಮಾತನಾಡಿದರು. ಜ. 25ರಂದು ಬೆಳಗ್ಗೆ 7.30ಕ್ಕೆ ಅಮೃತ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ಮ್ಯಾರಥಾನ್ ಓಟ ನಡೆಯಲಿದೆ. ಮಧ್ಯಾಹ್ನ 3 ಕ್ಕೆ ವರ್ಣರಂಜಿತ ಮೆರವಣಿಗೆಯೂ ನಡೆಯಲಿದೆ. ಫೆಬ್ರವರಿ 4 ರಂದು ಒಂದು ವರ್ಷದ ಪ್ಲಾಟಿನಂ ಜುಬಿಲಿ ಆಚರಣೆಯನ್ನು ವಿಧಾನಸಭಾ ಸ್ಪೀಕರ್ ಎ ಎನ್ ಶಂಸೀರ್ ಉದ್ಘಾಟಿಸುವರು.