ಕಾಸರಗೋಡು: ಕಾಸರಗೋಡಿನಲ್ಲಿ ವಿಷಾಹಾರ ಸೇವನೆಯಿಂದ ಮೃತಳಾದ 19 ವರ್ಷದ ವಿದ್ಯಾರ್ಥಿಯ ಸಾವಿನ ಬಗೆಗಿನ ವರದಿಗಳು ಕ್ಷಣ-ಕ್ಷಣಕ್ಕೂ ಬದಲಾಗುತ್ತಿದ್ದು, ಇದೀಗ ಆಕೆಯ ಸಾವಿಗೆ ಆತ್ಮಹತ್ಯೆಯೇ ಕಾರಣ ಎಂದು ವರದಿ ಹೊರಬಿದ್ದಿದೆ. ಬಾಲಕಿಯ ಆತ್ಮಹತ್ಯೆ ಪತ್ರ ಮತ್ತು ಮೊಬೈಲ್ ಪೋನ್ ವಿವರಗಳನ್ನು ಪೋಲೀಸರು ಪತ್ತೆ ಮಾಡಿದ ಬಳಿಕ ಸಾವಿನ ಕಾರಣ ಸ್ಪಷ್ಟವಾಗಿದೆ ಎನ್ನಲಾಗಿದೆ.
ಆಹಾರ ವಿಷಬಾಧೆಯಿಂದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಮೊದಲು ತೀರ್ಮಾನಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ದೇಹದಲ್ಲಿ ಫುಡ್ ಪಾಯ್ಸನ್ ಕಂಡುಬಂದಿಲ್ಲ, ವಿಷ ಸೇವಿಸಿ ಸಾವನ್ನಪ್ಪಿರುವ ಲಕ್ಷಣಗಳಿವೆ ಎಂದು ಮೊದಲ ಸೂಚನೆ ನೀಡಿದ್ದರು. ತನಿಖೆ ವೇಳೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಅಂಜುಶ್ರೀ ಮಾನಸಿಕ ಒತ್ತಡದಿಂದ ಬಳಲುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಇದೀಗ ದೃಢೀಕರಿಸಲಾಗಿದೆ. ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಬಾಲಕಿಯ ಸ್ನೇಹಿತರು, ಸಹಪಾಠಿಗಳು ಮತ್ತು ಸಂಬಂಧಿಕರ ಹೇಳಿಕೆಯನ್ನು ಪೋಲೀಸರು ಪಡೆಯಲಿದ್ದಾರೆ ಎಂದು ಪೋಲೀಸ್ ಮೂಲಗಳಿಂದ ತಿಳಿದುಬಂದಿದೆ.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಾಲಕಿಯ ಸಾವಿಗೆ ಫುಡ್ ಪಾಯ್ಸನ್ ಕಾರಣವಲ್ಲ, ವಿಷಾಂಶದಿಂದ ಉಂಟಾದ ಸಾವಲ್ಲ ಎಂದು ಹೇಳಲಾಗಿದೆ. ಯಕೃತ್ತು ಸೇರಿದಂತೆ ಆಂತರಿಕ ಅಂಗಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ವರದಿ ಹೇಳಿದೆ. ಯಾವ ರೀತಿಯ ವಿಷವನ್ನು ಸೇವಿಸಲಾಗಿದೆ ಎಂಬುದನ್ನು ಕಂಡುಹಿಡಿಯಲು ಆಂತರಿಕ ಅಂಗಗಳನ್ನು ರಾಸಾಯನಿಕ ಪರೀಕ್ಷೆಗೆ ಒಳಪಡಿಸಬೇಕು. ಕೋಝಿಕ್ಕೋಡ್ ಲ್ಯಾಬ್‍ಗೆ ಕಳುಹಿಸಲಾದ ಆಂತರಿಕ ಅಂಗಗಳ ರಾಸಾಯನಿಕ ಪರೀಕ್ಷೆಯ ಫಲಿತಾಂಶ ಮುಂದಿನ ದಿನಗಳಲ್ಲಿ ಹೊರಬೀಳಲಿದೆ. ಆಗ ಮಾತ್ರ ದೇಹಕ್ಕೆ ಯಾವ ರೀತಿಯ ವಿಷ ಸೇರಿದೆ ಎಂಬುದು ಸ್ಪಷ್ಟವಾಗಲಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೆ ತಿರುವು: ಅಂಜುಶ್ರೀ ಸಾವು ಆತ್ಮಹತ್ಯೆ!:
0
ಜನವರಿ 09, 2023
Tags