ಬದಿಯಡ್ಕ: ಕೇರಳ ರಾಜ್ಯಮಟ್ಟದ ಶಾಲಾ ಕಲೋತ್ಸವದಲ್ಲಿ ಅನ್ವಿತಾ ತಲ್ಪಣಾಜೆ ಪ್ರೌಢಶಾಲೆ ವಿಭಾಗದ ಕನ್ನಡ ಕಂಠಪಾಠ ಹಾಗೂ ಸಂಸ್ಕೃತ ಗಾನಾಲಾಪನ ಸ್ಪರ್ಧೆಗಳಲ್ಲಿ ಭಾಗವಹಿಸಿ ಎ ಗ್ರೇಡ್‍ನೊಂದಿಗೆ ಪ್ರಥಮ ಬಹುಮಾನ ಪಡೆದಿದ್ದಾಳೆ. ಎಂಎಸ್‍ಸಿಎಚ್‍ಎಸ್‍ಎಸ್ ನೀರ್ಚಾಲು ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ. ಈಕೆ ಶಿಕ್ಷಕ ದಂಪತಿಗಳಾದ ಶಿವಶಂಕರ ಭಟ್ ಮತ್ತು ಸುಧಾವಾಣಿ ಇವರ ಪುತ್ರಿ. ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯಲ್ಲಿ ವಿದುಷಿ ಗೀತಾ ಸಾರಡ್ಕ ಅವರಿಂದ ಶಾಸ್ತ್ರೀಯ ಸಂಗೀತ ಹಾಗೂ ಡಾ.ಸ್ನೇಹಾ ಪ್ರಕಾಶ್ ಅವರಿಂದ ಸುಗಮ ಸಂಗೀತ ಶಿಕ್ಷಣ ಪಡೆಯುತ್ತಿದ್ದಾಳೆ.
ಅನ್ವಿತಾ ತಲ್ಪಣಾಜೆ ರಾಜ್ಯಮಟ್ಟದಲ್ಲಿ ಪ್ರಥಮ
0
ಜನವರಿ 15, 2023
Tags