ಕಣ್ಣೂರು: ಗುಜರಾತ್ ಗಲಭೆಗೆ ಸಂಬಂಧಿಸಿದ ಬಿಬಿಸಿ ಸಾಕ್ಷ್ಯಚಿತ್ರ ಇಂಡಿಯಾ ದಿ ಮೋದಿ ಕ್ವೆಶ್ಚನ್‍ಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ವಿವಾದ ಸೃಷ್ಟಿಸಲು ಸಿಪಿಎಂ ಪ್ರಜ್ಞಾಪೂರ್ವಕ ಪ್ರಯತ್ನ ನಡೆಸುತ್ತಿದೆ ಎಂದು ಬಿಜೆಪಿ ಮುಖಂಡ ಎಂ.ಟಿ.ರಮೇಶ್ ಹೇಳಿರುವರು.
ಅವರು ಕಣ್ಣೂರಿನಲ್ಲಿ ಪತ್ರಕರ್ತರನ್ನು ಭೇಟಿಯಾಗಿ ಮಾತನಾಡಿದರು. ಸಾಕ್ಷ್ಯಚಿತ್ರ ದೇಶದ ಮಾನಹಾನಿ ಮಾಡುವ ಪ್ರಯತ್ನವಾಗಿದೆ ಎಂದು ಟೀಕಿಸಿದರು.
ಈ ವಿಷಯದಲ್ಲಿ ಡಿವೈಎಫ್‍ಐ ಮತ್ತು ಎಸ್‍ಎಫ್‍ಐ ನಿಲುವು ದೇಶಕ್ಕೆ ಸವಾಲಾಗಿದೆ ಎಂದು ಎಂ.ಟಿ.ರಮೇಶ್ ಆರೋಪಿಸಿದರು. ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುವುದು ಎಂಬುದು ಉದ್ವಿಗ್ನತೆ ಮತ್ತು ಗಲಭೆ ಸೃಷ್ಟಿಸುವ ಪ್ರಯತ್ನವಾಗಿದೆ. ಅವರು ನ್ಯಾಯಾಂಗ ವ್ಯವಸ್ಥೆ ಮತ್ತು ರಾಷ್ಟ್ರದ ಸಾರ್ವಭೌಮತೆಗೆ ಸವಾಲು ಹಾಕುತ್ತಿದ್ದಾರೆ ಎಂದರು.
ಅವರದು ಬಿಳಿಯರ ಮನಸ್ಸು. ಈ ವಿಚಾರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಧ್ಯಸ್ಥಿಕೆ ವಹಿಸಬೇಕು. ಪ್ರಕರಣವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇದಕ್ಕೆ ರಾಜ್ಯದ ಮುಖ್ಯಮಂತ್ರಿ ಬೆಂಬಲ ನೀಡುತ್ತಿದ್ದಾರೆಯೇ? ಸಂಘರ್ಷ ಉಂಟಾದರೆ ಅದರ ಹೊಣೆ ಮುಖ್ಯಮಂತ್ರಿಯದ್ದೇ ಆಗಿರುತ್ತದೆ ಎಂದು ಎಂ.ಟಿ.ರಮೇಶ್ ಹೇಳಿದರು.
ವಿವಾದಿತ ಸಾಕ್ಷ್ಯಚಿತ್ರ ಪ್ರದರ್ಶನ ದೇಶಕ್ಕೆ ಸವಾಲು, ಸಂಘರ್ಷ ಉಂಟಾದರೆ ಮುಖ್ಯಮಂತ್ರಿ ಹೊಣೆ: ಎಂ.ಟಿ.ರಮೇಶ್
0
ಜನವರಿ 24, 2023