ತಿರುವನಂತಪುರಂ: ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯಕ್ರಮದ ಪ್ರಾಯೋಗಿಕ ಅನುಭವ ನೀಡುವ ನೆಪದಲ್ಲಿ ಶಸ್ತ್ರಾಸ್ತ್ರ ತಯಾರಿಕೆ ನಡೆಸಲಾಗುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಇದರೊಂದಿಗೆ ಪಠ್ಯಕ್ರಮದಲ್ಲಿ ಕೆಲಸದ ಅನುಭವ ನೀಡುವ ನೆಪದಲ್ಲಿ ಯಾರೂ ಆಯುಧಗಳನ್ನು ತಯಾರಿಸದಂತೆ ನೋಡಿಕೊಳ್ಳುವಂತೆ ತಾಂತ್ರಿಕ ಶಿಕ್ಷಣ ಇಲಾಖೆ ಅಧೀನದ ಎಲ್ಲ ಸಂಸ್ಥೆಗಳ ಮುಖ್ಯಸ್ಥರಿಗೆ ನಿರ್ದೇಶಕರು ಸೂಚನೆ ನೀಡಿದ್ದಾರೆ.
ಪ್ರಭಾರ ತಾಂತ್ರಿಕ ಶಿಕ್ಷಣ ನಿರ್ದೇಶಕ ಬೈಜುಭಾಯಿ ಈ ಆದೇಶ ನೀಡಿದ್ದಾರೆ.
ಪ್ರಾಯೋಗಿಕ ತರಗತಿಯ ಕೆಲಸದ ಅನುಭವ ನೀಡುವ ನೆಪದಲ್ಲಿ ಶಸ್ತ್ರಾಸ್ತ್ರ ತಯಾರಿಕೆ ಮಾಡಲಾಗುತ್ತಿದೆ ಎಂದು ಎಡಿಜಿಪಿ ಈ ಹಿಂದೆ ವರದಿ ನೀಡಿದ್ದರು. ಅನುಭವದ ನೆಪದಲ್ಲಿ ಲ್ಯಾಬ್ ಗಳಲ್ಲಿ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುತ್ತಿದೆ ಎಂದು ಡಿ.21ರಂದು ಎಡಿಜಿಪಿ ಸರಕಾರಕ್ಕೆ ವರದಿ ನೀಡಿದ್ದಾರೆ. ಇದರ ಆಧಾರದ ಮೇಲೆ ಪ್ರಭಾರಿ ತಾಂತ್ರಿಕ ಶಿಕ್ಷಣ ನಿರ್ದೇಶಕ ಬೈಜುಭಾಯಿ ಟಿ.ಪಿ.ಹೊಸ ಆದೇಶ ಹೊರಡಿಸಿದ್ದಾರೆ.
ಪ್ರಯೋಗಾಲಯಗಳಲ್ಲಿ ಕಟ್ಟುನಿಟ್ಟಿನ ನಿಗಾ ಮತ್ತು ಮೇಲ್ವಿಚಾರಣೆ ಇರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಶಿಕ್ಷಕರμÉ್ಟೀ ಅಲ್ಲ, ಲ್ಯಾಬ್ ಸಿಬ್ಬಂದಿಯೂ ಜಾಗೃತರಾಗಬೇಕು. ಸಂಸ್ಥೆಗಳ ಮುಖ್ಯಸ್ಥರು ವಿಶೇಷ ಗಮನಹರಿಸಬೇಕು ಎಂದೂ ಆದೇಶಿಸಲಾಗಿದೆ.
ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯಕ್ರಮದ ಪ್ರಾಯೋಗಿಕ ಕೆಲಸದ ಅನುಭವದ ನೆಪದಲ್ಲಿ ಶಸ್ತ್ರಾಸ್ತ್ರಗಳ ತಯಾರಿ ಶಂಕೆ: ಸೂಚನೆ ನೀಡಿದ ಎಡಿಜಿಪಿ
0
ಜನವರಿ 14, 2023